ಕಾಸರಗೋಡು: ನೇಪಾಳದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಮೂವರು ಪತ್ತನಂತಿಟ್ಟದಿಂದ ನೇಪಾಳಕ್ಕೆ ತೆರಳಿದ ನೇಪಾಳಿ ನಿವಾಸಿಗಳು ಒಳಗೊಂಡಿದ್ದಾರೆ.
ರಾಜು ಠಾಕೂರಿ, ರಬಿನ್ ಹಮಾಲ್ ಹಾಗೂ ಅನಿಲ್ ಶಾಹಿ ಮೃತಪಟ್ಟವರು. ಆನಿಕ್ಕಾಡ್ ನಿವಾಸಿ, ನೇಪಾಳದಲ್ಲಿ ಕ್ರೈಸ್ತ ಪಾದ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮ್ಯಾಥ್ಯೂ ಫಿಲಿಪ್ ಎಂಬವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ವಾಪಸಾಗುವ ಮಧ್ಯೆ ದುರ್ಘಟನೆ ಸಂಭವಿಸಿದೆ.
ಒಟ್ಟು ಐದು ಮಂದಿ ನೇಪಾಳ ನಿವಾಸಿಗಳು ಪತ್ತನಂತಿಟ್ಟ ಆಗಮಿಸಿದ್ದು, ಇಲ್ಲಿನ ಆನಿಕ್ಕಾಡ್‍ನಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮ ಮುಗಿಸಿ ವಾಪಸಾಗುವ ಮಧ್ಯೆ ದೀಪಕ್ ತಮಾಹ್ ಹಾಗೂ ಸರಣ್ ಎಂಬವರು ಕಾಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಇತರ ಮೂರು ಮಂದಿ ಪೋಖಾರಯಿಗೆ ತೆರಳುವ ಮಧ್ಯೆ ದುರ್ಘಟನೆ ನಡೆದಿದೆ. ಮ್ಯಾಥ್ಯೂ ಫಿಲಿಪ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಐದೂ ಮಂದಿ ಪತ್ತನಂತಿಟ್ಟ ಆಗಮಿಸಿದ್ದರು. ಮ್ಯಾಥ್ಯೂ ಫಿಲಿಪ್ ಅವರು ಕಳೆದ 45ವರ್ಷಗಳಿಂದ ನೇಪಾಳದಲ್ಲಿ ಕ್ರೈಸ್ತ ಪಾದ್ರಿಯಾಗಿ ಕರ್ತವ್ಯ ನಿರ್ವಃಇಸುತ್ತಿದ್ದರು.
ನೇಪಾಳ ವಿಮಾನ ದುರಂತ: ಮೃತಪಟ್ಟವರಲ್ಲಿ ಪತ್ತನಂತಿಟ್ಟದಿಂದ ತೆರಳಿದ್ದ ಮೂವರು ನೇಪಾಳಿ ನಿವಾಸಿಗಳು
0
ಜನವರಿ 15, 2023
Tags