ಕಾಸರಗೋಡು: ನಗರದ ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಕೋದಂಡರಾಮ ದೇವರ ಮೂಲ ಪ್ರತಿಷ್ಠೆ ನಡೆದು 250ವರ್ಷ ಸಂದ ಹಿನ್ನೆಲೆಯಲ್ಲಿ ಪ್ರತಿಷ್ಠಾ ಆಚರಣಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಮಡಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ಜ. 15ರಂದು ಬೆಳಗೆಗ ದೀಪ ಪ್ರತಿಷ್ಠೆಯೊಂದಿಗೆ 24ತಾಸುಗಳ ಕಾಳ ನಡೆಯಲಿರುವ ಏಕಾಹ ಭಜನೆ ಆರಂಭಗೊಳ್ಳಲಿದೆ. ಸಂಜೆ 5.30ಕ್ಕೆ ಶ್ರೀರಾಮಪೇಟೆಯ ರಾಮವಾಡಿ ಪ್ರದೇಶದಿಂದ ಹಸಿರುವಾಣಿ ಮೆರವಣಿಗೆ ದೇವಸ್ಥಾನಕ್ಕೆ ತಲುಪಲಿದ್ದು, ನಂತರ ಉಗ್ರಾಣ ಪೂಜೆ ನಡೆಯುವುದು.ಜ.19ರಿಂದ ಫೆ. 2ರ ವರೆಗೆ ವಿವಿಧ ಧಾರ್ಮಿಕ, ವಐದಿಕ ಕಾರ್ಯಕ್ರಮ ನಡೆಯಲಿರುವುದು. ಜ. 30ರಂದು ದೇವಸ್ಥಾನಕ್ಕೆ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಪಾದಂಗಳವರು ಚಿತ್ತೈಸಲಿದ್ದಾರೆ. ಜ. 31ರಂದು ಶ್ರೀ ಪಾದಂಗಳವರಿಂದ ಶ್ರೀದೇವರಿಗೆ ಶತಕಲಶಾಭಿಷೇಕ, ಲಘು ವಿಷ್ಣು ಕಲಶಾಭಿಷೇಕ, ಕನಕಾಭಿಷೇಕ ನಡೆಯಲಿರುವುದು. ರಾತ್ರಿ ಶ್ರೀದೇವರ ಬೆಳ್ಳಿ ಲಾಲಕಿ ಪೇಟೆ ಉತ್ಸವ ನಡೆಯಲಿರುವುದು.
ಕಾರ್ಯಕ್ರಮದ ಅಂಗವಾಘಿ ಜ. 26ರಿಂದ ಫೆ. 1ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಮದ್ಭಾಗವತಸಪ್ತಾಹ ನಡೆಯಲಿರುವುದು. ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಭಾಗವತ ಪಾರಾಯಣ ನಡೆಯಲಿರುವುದು ವೇದಮೂರ್ತಿ ಜಿ. ಸಓಮ ಕುಮಾರ ಭಟ್ಟ ತರವೂರು ಅವರು ಸಂಸ್ಕøತದಲ್ಲಿ ಶ್ರೀ ಮದ್ಭಾಗವತ ಪಾರಾಯಣ ನಡೆಸಿಕೊಡಲಿದ್ದಾರೆ. ಇದರ ಕನ್ನಡ ಪರಾಯಣವನ್ನು ಸಂಜೆ 5.30ರಿಂದ 7.30ರ ವರೆಗೆ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ನಡೆಸಿಕೊಡಲಿದ್ದಾರೆ.
ಗೀತಾ ಕಂಠಪಾಠ, ಛದ್ಮವೇಷ, ರಸಪ್ರಶ್ನೆ ಸಪರ್ಧೆ ಏರ್ಪಡಿಸಲಾಗಿದೆ. ಜ. 16ರಿಂದ 25ರ ವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವೂ ಜರುಗಲಿದೆ.
ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಮೂಲ ಪ್ರತಿಷ್ಠಾ ವರ್ಷಚರಣೆ ಮಹೋತ್ಸವ
0
ಜನವರಿ 14, 2023
Tags