ನವದೆಹಲಿ: ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತದ ತಪ್ಪಾದ ನಕ್ಷೆಯನ್ನು ಹಂಚಿಕೊಂಡಿದ್ದಕ್ಕಾಗಿ ಜೂಮ್ ಸಿಇಒ ಎರಿಕ್ ಯುವಾನ್ ಅವರನ್ನು ತಿದ್ದಿದ್ದರು.
ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಭಾರತದ ತಪ್ಪಾದ ನಕ್ಷೆಯನ್ನು ಬಳಸಿದ್ದಕ್ಕಾಗಿ ವಾಟ್ಸ್ಆಯಪ್ಗೆ ಬುದ್ಧಿವಾದ ಹೇಳಿದ್ದಾರೆ. 'ಆತ್ಮೀಯ ವಾಟ್ಸ್ಅಪ್, ದಯವಿಟ್ಟು ಭಾರತದ ನಕ್ಷೆಯ ದೋಷವನ್ನು ಆದಷ್ಟು ಬೇಗ ಸರಿಪಡಿಸಿ. ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲಾ ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳು ಸರಿಯಾದ ನಕ್ಷೆಗಳನ್ನು ಬಳಸಬೇಕು' ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಚಂದ್ರಶೇಖರ್ ಅವರು ವಾಟ್ಸಾಪ್‌ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಆದ ವೀಡಿಯೊದಲ್ಲಿ ತಪ್ಪಾದ ಭಾರತದ ನಕ್ಷೆ ಇರುವುದನ್ನು ಗಮನಿಸಿ ಈ ರೀತಿ ಟ್ವೀಟ್ ಮಾಡಿದ್ದರು.
ಇದಾದ ಬಳಿಕ ವಾಟ್ಸಪ್ ಟ್ವಿಟರ್ನಲ್ಲಿ ಕ್ಷಮೆ ಯಾಚಿಸಿ ಟ್ವೀಟ್ ಮಾಡಿದೆ. ಅದರ ಜೊತೆಗೆ ಅಪ್ಲೋಡ್ ಮಾಡಿದ್ದ ವಿಡಿಯೋವನ್ನೂ ತೆಗೆದು ಹಾಕಿತ್ತು. ಈ ಟ್ವೀಟ್ನ ಬೆನ್ನಲ್ಲೇ ಅನೇಕರು ಭಾರತದ ತಪ್ಪಾದ ಮ್ಯಾಪ್ ಎಲ್ಲೆಲ್ಲ ಪೋಸ್ಟ್ ಮಾಡಲಾಗಿದೆ ಎಂದು ಎತ್ತಿ ತೋರಿಸ ತೊಡಗಿದ್ದಾರೆ. ಒಬ್ಬರಂತೂ 'ಮಹಾರಾಷ್ಟ್ರ ಟೈಮ್ಸ್' ಹೆಸೆರಿನ ಪತ್ರಿಕೆಯಲ್ಲೂ ತಪ್ಪಾದ ನಕ್ಷೆಯನ್ನು ತೋರಿಸಲಾಗಿತ್ತು ಎಂದು ಫೋಟೊ ಸಹಿತ ಆರೋಪಿಸಿದ್ದಾರೆ.