ಕಾಸರಗೋಡು: ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಿರಿಯ ಅಧೀಕ್ಷಕಿ ಟಿ ಸತ್ಯವತಿ, ಕಾಸರಗೋಡು ಜಿಲ್ಲಾ ಮಕ್ಕಳ ಅಭಿವೃದ್ಧಿ ಯೋಜನೆಯ ಕಛೇರಿಯ ಐಸಿಡಿಎಸ್ ಮೇಲ್ವಿಚಾರಕಿ ಎ.ಕಾತ್ರ್ಯಾಯಿನಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಚೇರಿಯಲ್ಲಿ ಜರುಗಿತು. ಜಿಲ್ಲಾ ಮಟ್ಟದ ಸಿಬ್ಬಂದಿ ಪರಿಷತ್ತಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಬೀಳ್ಕೊಡುಗೆ ಸಭೆ ಆಯೋಜಿಸಲಾಗಿತ್ತು.
ಜಿಲ್ಲಾ ಮಕ್ಕಳ ಮತ್ತು ಮಹಿಳಾ ಕಲ್ಯಾಣಾಧಿಕಾರಿ ಶಿಮ್ನಾ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈನಿ ಪಿ.ಐಸಾಕ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಅಧೀಕ್ಷಕ ಅಮರನಾಥ ಭಾಸ್ಕರ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಲತಿಕಾ ಪತ್ರವಳಪ್ಪಿಲ್, ಜೂಡಿ ಎ.ಜೆ, ಲತಾ ಕೆ.ಆರ್, ಜೂನಿಯರ್ ಸೂಪರಿಂಟೆಂಡೆಂಟ್ ಕೆ. ರಜೀಶ್, ಸ್ಟಾಫ್ ಕೌನ್ಸಿಲ್ ಕನ್ವೀನರ್ ಎ.ಟಿ. ಶಶಿ, ವಿನೋದ್ ಮೈಯ್ಯಂಗಾನ ಉಪಸ್ಥಿತರಿದ್ದರು.
ಬೀಳ್ಕೊಡುಗೆ
0
ಜನವರಿ 29, 2023
Tags