HEALTH TIPS

ಚೀನಾಗೆ ಪ್ರತಿತಂತ್ರ: ಅರುಣಾಚಲ ಜಲವಿದ್ಯುತ್ ಯೋಜನೆಗೆ ವೇಗ

 

         ನವದೆಹಲಿ: ಚೀನಾದ ಜಲಯುದ್ಧ ಬೆದರಿಕೆಗೆ ಪ್ರತಿಯಾಗಿ ಕೇಂದ್ರ ಸರ್ಕಾರವು ಅರುಣಾಚಲಪ್ರದೇಶದ ಸುಬನ್ಸಿರಿಯಲ್ಲಿ 11 ಸಾವಿರ ಮೆಗಾವಾಟ್ ಸಾಮರ್ಥ್ಯದ ಅತಿ ದೊಡ್ಡ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಈಶಾನ್ಯ ಗಡಿಯಲ್ಲಿ ಚೀನಾ ನಿರ್ವಿುಸಲಿರುವ ಅಣೆಕಟ್ಟೆಗೆ ಪ್ರತಿಯಾಗಿ ಭಾರತವು ಸ್ಥಗಿತಗೊಂಡಿದ್ದ ಮೂರು ಜಲವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದೆ.

                    ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಮೆಡೋಗ್​ನಲ್ಲಿ ಯಾರ್ಲುಂಗ್ ಜಾಂಗ್ಬೊ (ಬ್ರಹ್ಮಪುತ್ರ) ಉಪನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ವಿುಸಿ 60 ಸಾವಿರ ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಗೆ ಚೀನಾ ಸರ್ಕಾರ ಯೋಜನೆ ಮಾಡಿದೆ. ಈ ಯೋಜನೆಯಿಂದ ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ನೀರಿನ ಕೊರತೆ ಸೇರಿ ಹಲವಾರು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

                  ಒಂದು ವೇಳೆ ಚೀನಾ ಈ ಅಣೆಕಟ್ಟೆ ನೀರನ್ನು ಇದ್ದಕ್ಕಿದ್ದಂತೆ ಹರಿಯಬಿಟ್ಟರೆ ಈ ಎರಡು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಲಿದೆ. ಬ್ರಹ್ಮಪುತ್ರ ನದಿಯು ಭಾರತದಲ್ಲಿ ಶೇ. 30ರಷ್ಟು ಶುದ್ಧ ನೀರಿನ ಸಂಪನ್ಮೂಲ ಮತ್ತು ದೇಶದ ಒಟ್ಟಾರೆ ಜಲವಿದ್ಯುತ್ ಸಾಮರ್ಥ್ಯದ ಶೇ.40 ರಷ್ಟು ಭಾಗವನ್ನು ಹೊಂದಿದೆ. ಬ್ರಹ್ಮಪುತ್ರ ಜಲಾನಯನ ಪ್ರದೇಶದ ಶೇ.50 ರಷ್ಟು ಭಾಗವು ಚೀನಾದ ಗಡಿಗಳಲ್ಲಿದೆ.

                     ಅನುಕೂಲವೇನು?: ಭಾರತದಲ್ಲಿ 2 ಸಾವಿರ ಮೆಗಾ ವಾಟ್ ಸಾಮರ್ಥ್ಯದ ಲೋವರ್ ಸುಬನ್ಸಿರಿ ಯೋಜನೆಯು ಈ ವರ್ಷದ ಮಧ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಲ್ಲಿ ಕೈಗೊಂಡಿರುವ ಜಲವಿದ್ಯುತ್ ಯೋಜನೆಗಳು ವಿದ್ಯುತ್ ಉತ್ಪಾದಿಸುವ ಜತೆಗೆ ಚೀನಾ ತಾನು ನಿರ್ವಿುಸಲು ಉದ್ದೇಶಿಸಿರುವ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಯಬಿಟ್ಟ ಸಂದರ್ಭದಲ್ಲಿ ಉಂಟಾಗುವ ಪ್ರವಾಹವನ್ನು ತಡೆಯಲು ಮತ್ತು ನೀರಿನ ಕೊರತೆಯನ್ನು ಒಂದು ವರ್ಷದವರೆಗೆ ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಜನರ ಜೀವನೋಪಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಲ್ಲಿ ಈ ಯೋಜನೆ ಮಹತ್ವದ್ದಾಗಿದೆ. ಅಣೆಕಟ್ಟೆ ನಿರ್ವಣದಿಂದ ಭಾರತದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳವಾಗಲಿದೆ.

                                ಚೀನಾಕ್ಕೆ ತಿರುಗೇಟು
              ಚೀನಾದ ಜಲಯುದ್ಧಗಳನ್ನು ಎದುರಿಸುವ ನಿಟ್ಟಿನಲ್ಲಿ ಈಶಾನ್ಯ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಹೇಳಲಾಗಿದೆ. ಚೀನಾವು ಮೆಡೋಗ್ ಅಣೆಕಟ್ಟನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯು ಭಾರತ ಮತ್ತು ಬಾಂಗ್ಲಾದೇಶಕ್ಕೆ ಆತಂಕವನ್ನುಂಟು ಮಾಡಿದೆ ಎಂದು ಮೂಲಗಳು ಹೇಳಿವೆ. ಇದು ಈಶಾನ್ಯ ರಾಜ್ಯದ ಸಮಸ್ಯೆಯಲ್ಲ. ರಾಷ್ಟ್ರೀಯ ಸಮಸ್ಯೆಯಾಗಿದೆ. ಅಣೆಕಟ್ಟೆ ನಿರ್ವಣದ ನಂತರ ಚೀನಾ ನೀರನ್ನು ತಿರುಗಿಸಬಹುದು ಮತ್ತು ಯಾವುದೇ ಸಮಯದಲ್ಲಿ ನೀರನ್ನು ಬಿಡುಗಡೆ ಮಾಡ ಬಹುದು. ಇದರಿಂದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಲಾಗಿದೆ.

                         ಕಳವಳಕ್ಕೆ ಕಾರಣ

* ಮೆಡೋಗ್​ನಲ್ಲಿ ಅಣೆಕಟ್ಟೆ ನಿರ್ವಣದಿಂದ ಕೆಳಭಾಗದ ದೇಶಗಳು ಅದರಲ್ಲೂ ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

* ಪರಿಸರ ವೈಪರೀತ್ಯ, ಕೃತಕ ಪ್ರವಾಹ ಉಂಟಾಗಬಹುದು.

* ನೀರಿನ ತಿರುವಿನಿಂದ ಈಶಾನ್ಯ ಪ್ರದೇಶದಲ್ಲಿ ಭಾರತದ ಕೃಷಿ ಅಗತ್ಯವನ್ನು ತಗ್ಗಿಸಬಹುದು.

* ಅಸಮರ್ಪಕ ನಿರ್ವಹಣೆಯು ಭಾರತದಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು.

* ಹಿಮಾಲಯ ನದಿಗಳಿಗೆ ನಿರ್ವಿುಸಿರುವ ಅಣೆಕಟ್ಟೆಗಳು ಭಾರತವನ್ನು ತಲುಪುವ ಮೊದಲೇ ಭಾರತ ಮತ್ತು ಬಾಂಗ್ಲಾದೇಶಗಳಿಗೆ ನಷ್ಟ ಮತ್ತು ತೊಂದರೆ ಉಂಟುಮಾಡಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries