ಕೋಝಿಕ್ಕೋಡ್: ಭಾರತವು ಧಾರ್ಮಿಕ ಸ್ವಾತಂತ್ರ್ಯದ ನಾಡು ಎಂದು ಸಮಸ್ತ ಕೇರಳ ಸುನ್ನಿ ಜಮೀಯತುಲ್ ಉಲೇಮಾ ಕಾರ್ಯದರ್ಶಿ ಪೊನ್ಮಲಾ ಅಬ್ದುಲ್ ಖಾದರ್ ಮುಸ್ಲ್ಯಾರ್ ಹೇಳಿರುವರು.
ಸೌದಿ ಅರೇಬಿಯಾ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿಯೂ ಮುಸ್ಲಿಮರು ಭಾರತದಂತೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಭಾರತವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವ ದೇಶವಾಗಿದೆ ಎಂದವರು ಬೊಟ್ಟುಮಾಡಿರುವರು.
ಕೆಳ ಹಂತದವರೆಗೂ ಧಾರ್ಮಿಕ ಚಟುವಟಿಕೆ ನಡೆಸುವ ಸ್ವಾತಂತ್ರ್ಯ ಬೇರೆ ಯಾವ ದೇಶಕ್ಕೂ ಇಲ್ಲ ಎಂದು ಮುಸ್ಲ್ಯಾರ್ ಹೇಳಿದರು. ಅವರು ಕೋಝಿಕ್ಕೋಡ್ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ಕೆಎನ್ ಎಂ ರಾಜ್ಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಸ್ವಲಾಹಿ ಮಾತನಾಡಿ, ಭಾರತವು ಮುಸ್ಲಿಮರಿಗೆ ಸುರಕ್ಷಿತ ಮತ್ತು ಶಾಂತಿಯುತ ದೇಶವಾಗಿದೆ. ಭಾರತದ ಜಾತ್ಯತೀತತೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕೇರಳದ ಯುವಕರನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
'ಸೌದಿಯಲ್ಲಿಯೂ ಮುಸ್ಲಿಮರಿಗೆ ಇಷ್ಟು ಸ್ವಾತಂತ್ರ್ಯ ಲಭಿಸುವುದಿಲ್ಲ': ಭಾರತ ಧಾರ್ಮಿಕ ಸ್ವಾತಂತ್ರ್ಯದ ನಾಡು: ದುರ್ಬಳಕೆ ಬೇಡ: ಎಪಿ
0
ಜನವರಿ 28, 2023