ನವದೆಹಲಿ : ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹ ಎಳೆದೊಯ್ದಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಆಶುತೋಶ್ ಭಾರದ್ವಾಜ್‌ಗೆ ಇಲ್ಲಿಯ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.
ಷರತ್ತುಬದ್ಧ ಜಾಮೀನು ಇದಾಗಿದ್ದು, ₹50,000 ಮೊತ್ತದ ಬಾಂಡ್ ನೀಡಲು ನ್ಯಾಯಾಲಯ ಹೇಳಿದೆ. ಸಾಕ್ಷ್ಯವನ್ನು ತಿರುಚುವಂತಿಲ್ಲ, ರಾಷ್ಟ್ರ ರಾಜಧಾನಿ ಪ್ರದೇಶದ ಹೊರಗೆ ಪ್ರಯಾಣಿಸುವಂತಿಲ್ಲ, ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡುವಂತಿಲ್ಲ ಮತ್ತು ಅಧಿಕಾರಿಗಳು ಕರೆದಾಗ ಬಂದು ತನಿಖೆಗೆ ಸಹಕರಿಸಬೇಕು ಎಂಬ ಅಂಶಗಳು ಷರತ್ತಿನಲ್ಲಿ ಸೇರಿವೆ.