ಕಾಸರಗೋಡು: ವಾರದಿಂದ ಬೇಕಲದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಬೀಚ್ ಉತ್ಸವ ಇಂದು(ಸೋಮವಾರ) ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದೆ. ಉತ್ಸವ ನಡೆಯುತ್ತಿರುವ ವೇದಿಕೆ 1 ಚಂದ್ರಗಿರಿಯಲ್ಲಿ ಸಮಾರೋಪ ನಡೆಯಲಿದ್ದು, ಸಹಕಾರ ನೋಂದಣಿ ಇಲಾಖೆ ಸಚಿವ ವಿ.ಎನ್.ವಾಸವನ್, ಗ್ರಂಥಲೋಕದ ಸಂಪಾದಕ ಪಿ. ವಿ.ಕೆ.ಪನಾಯಾಲ್, ಮಾಜಿ ಶಾಸಕ ಕೆ.ಪಿ.ಸತೀಶ್ಚಂದ್ರನ್ ಮತ್ತಿತರರು ಮಾತನಾಡುವರು. ಸಂಜೆ 7.30 ಕ್ಕೆ ಕಲಾಸಂಧ್ಯಾ, ಸ್ಟೀಫನ್ ದೇವಸ್ಸಿ ಮತ್ತು ಸಾಲಿಡ್ ಬ್ಯಾಂಡ್ ಒಳಗೊಂಡ ಮೆಗಾ ಲೈವ್ ಬ್ಯಾಂಡ್ ಕೀಬೋರ್ಡ್‍ನಲ್ಲಿ ಅದ್ಭುತ ರಾತ್ರಿಯನ್ನು ಪ್ರದರ್ಶಿಸುವರು. ಸÀಂಜೆ 6:30ರಿಂದ ಪಯಸ್ವಿನಿ ಮತ್ತು ತೇಜಸ್ವಿನಿ ವೇದಿಕೆಗಳಲ್ಲಿ ಸ್ಥಳೀಯ ಕಲಾ ಕಾರ್ಯಕ್ರಮಗಳು ನಡೆಯಲಿವೆ.
ಬೇಕಲ ಫೆಸ್ಟ್ ಇಂದು ಸಮಾರೋಪ
0
ಜನವರಿ 01, 2023