HEALTH TIPS

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ಭಾರತ ನೋಟಿಸ್‌

 

              ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ (ಐಡಬ್ಲ್ಯುಟಿ) ಒಪ್ಪಂದದ ಮಾರ್ಪಾಡಿಗೆ ಸೂಚಿಸಿ ಭಾರತವು ಪಾಕಿಸ್ತಾನಕ್ಕೆ ನೋಟಿಸ್‌ ನೀಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.

                ಗಡಿಯಾಚೆಗಿನ ನದಿಗಳಿಗೆ ಸಂಬಂಧಿಸಿದ ವಿಷಯಗಳ ಒಪ್ಪಂದಕ್ಕೆ ಆರು ದಶಕಗಳ ಹಿಂದೆಯೇ ಸಹಿ ಹಾಕಲಾಗಿದೆ.

               ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್‌ ಯೋಜನೆಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ಸಲುವಾಗಿ, ಇದರ ಅನುಷ್ಠಾನದಲ್ಲಿ ಇಸ್ಲಾಮಾಬಾದ್‌ ಅನುಸರಿಸುತ್ತಿರುವ 'ಹಠಮಾರಿತನ' ಗಮನಿಸಿ, ಕೆಲ ಮಾರ್ಪಾಡಿಗಾಗಿ ಒಪ್ಪಂದದ ವಿಧಿ XII (3)ರ ನಿಬಂಧನೆಗಳ ಪ್ರಕಾರ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ.

                  ಗಡಿಯಾಚೆಗಿನ ಹಲವು ನದಿಗಳ ನೀರು ಹಂಚಿಕೆಯಲ್ಲಿ ಉಭಯ ರಾಷ್ಟ್ರಗಳು ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕರಿಸುವ ಕಾರ್ಯವಿಧಾನಕ್ಕೆ ವಿಶ್ವಬ್ಯಾಂಕ್‌ ಸಹಿ ಒಳಗೊಂಡ ಈ ಒಪ್ಪಂದಕ್ಕೆ ಒಂಬತ್ತು ವರ್ಷಗಳ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು.

                'ಐಡಬ್ಲ್ಯುಟಿಯ ಉಲ್ಲಂಘನೆ ಸರಿಪಡಿಸಲು ಪಾಕಿಸ್ತಾನಕ್ಕೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಲು 90 ದಿನಗಳ ಅವಕಾಶವನ್ನು ಒದಗಿಸುವುದು ನೋಟಿಸ್‌ನ ಉದ್ದೇಶವಾಗಿದೆ. ಕಳೆದ 62 ವರ್ಷಗಳಲ್ಲಿ ಕಲಿತ ಪಾಠಗಳನ್ನು ಅಳವಡಿಸಿಕೊಳ್ಳಲು ಈ ಒಪ್ಪಂದ ಪರಿಷ್ಕರಿಸಲಾಗುತ್ತಿದೆ. ಈ ಒಪ್ಪಂದ ಅನುಷ್ಠಾನದಲ್ಲಿ ಭಾರತ ಜವಾಬ್ದಾರಿಯುತ ಪಾಲುದಾರ ಮತ್ತು ಇದಕ್ಕೆ ಅಚಲ ಬೆಂಬಲವನ್ನು ನೀಡುತ್ತಿದೆ' ಎಂದು ಮತ್ತೊಂದು ಮೂಲ ಹೇಳಿದೆ.

                 'ಪಾಕಿಸ್ತಾನದ ಕ್ರಮಗಳು ಈ ಒಪ್ಪಂದದ ನಿಬಂಧನೆಗಳು ಮತ್ತು ಅವುಗಳ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಹಾಗಾಗಿ ಒಪ್ಪಂದ ಮಾರ್ಪಡಿಸಲು ಭಾರತವು ನೋಟಿಸ್‌ ನೀಡಿದೆ' ಎಂದು ಮೂಲ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries