ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಬಿ.ಸಿ ರೋಡ್ ನಿವಾಸಿ ಆನಂದ ಎಂಬವರ ಮನೆಗೆ ಹಾಡಹಗಲು ನುಗ್ಗಿದ ಕಳ್ಳರು ಹತ್ತು ಪವನು ಚಿನ್ನಾಭರಣ ದೋಚಿದ್ದಾರೆ.
ಆನಂದ, ಇವರ ಪತ್ನಿ ಹಾಗೂ ಮಕ್ಕಳು ಬುಧವಾರ ಬೆಳಗ್ಗೆ ಮನೆ ಸನಿಹದ ಹೇರೂರು ಬಜ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಉತ್ಸವಕ್ಕೆ ತೆರಳಿದ್ದು, ಮಧ್ಯಾಹ್ನ ವಾಪಸಾಗುವಾಗ ಅಡುಗೆ ಕೊಠಡಿಯ ಬಾಗಿಲು ತೆರೆದಿರಿಸಿರುವುದು ಪತ್ತೆಯಾಗಿತ್ತು.ಬೆಡ್‍ರೂಂ ತೆರಳಿ ತಪಾಸಣೆ ನಡೆಸಿದಾಗ ಮಂಚದ ಬೆಡ್‍ನ ಸಂದಿಗೆ ಇರಿಸಿಲಾಗಿದ್ದ ಚಿನ್ನ ಕಳವಾಗಿರುವುದು ಪತ್ತೆಯಾಘಿದೆ. ಎರಡು ಬಳೆ, ಮೂರು ಮಾಲೆ, ಬೆಂಡೋಲೆ ಕಳವಾಗಿರುವ ಚಿನ್ನದಲ್ಲಿ ಒಳಗೊಂಡಿದೆ. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರ ತಂಡ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಇತ್ತೀಚಿನ ದಿನಗಳಲ್ಲಿ ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ಕಳವು ಕೃತ್ಯ ಹೆಚ್ಚಾಗುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೇರೂರಿನಲ್ಲಿ ಹಾಡಹಗಲು ಮನೆಗೆ ನುಗ್ಗಿ ಹತ್ತು ಪವನು ಚಿನ್ನಾಭರಣ ಕಳವು
0
ಜನವರಿ 05, 2023