ಕಾಸರಗೋಡು: ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘದ ದಶಮಾನೋತ್ಸವ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಸಮಾಜ ಬಾಂಧವರ ಕ್ರೀಡಾಕೂಟ ಜ. 8ರಂದು ಬೆಳಗ್ಗೆ 9ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಕಲಾನಿಲಯ ಮೈದಾನದಲ್ಲಿ ಜರುಗಲಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಕ್ರೀಡಾಕೂಟ ಉದ್ಘಾಟಿಸುವರು. ಸಂಘಟನೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಪೆರ್ಲದಲ್ಲಿ ಅಗಸರ ಯಾನೆ ಮಡಿವಾಳರ ಸಂಘದ ಕ್ರೀಡಾಕೂಟ
0
ಜನವರಿ 06, 2023
Tags