ಕಾಸರಗೋಡು: ನಾಗರಿಕ ಸೇವೆ ಮತ್ತು ಸಾರ್ವಜನಿಕ ಶಿಕ್ಷಣ ಸಂರಕ್ಷಿಸುವಂತೆ ಆಗ್ರಹಿಸಿ ಅಸೋಸಿಯೇಶನ್ ಫಾರ್ ಸ್ಟೇಟ್ ಎಂಪ್ಲೋಯೀಸ್ ಏಂಡ್ ಟೀಚರ್ಸ್(ಎಎಸ್‍ಇಟಿ)ವತಿಯಿಂದ ಜ. 28ರಿಂದ ನಾಗರಿಕ ಸೇವಾ ಸಂರಕ್ಷಣಾ ಜಾಥಾ ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಿಂದ ಪ್ರಯಾಣ ಆರಂಭಿಸಲಿದೆ. ಕೇರಳದ ವಿವಿಧೆಡೆಯಿಂದ ಕಾಸರಗೋಡು ತಲುಪುವ ಸಹಭಾಗಿತ್ವದ ಪಿಂಚಣಿ ಸಂತ್ರಸ್ತರು ಜಾಥಾ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದು ಜಾಥಾ ಪ್ರಬಂಧಕ ಹನೀಫಾ ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾಥಾ ಕ್ಯಾಪ್ಟನ್ ಮತ್ತು ರಾಜ್ಯ ನೌಕರರ ಸಂಘಶಿಕ್ಷಕರ ಅಧ್ಯಕ್ಷರು ಕೆ. ಬಿಲಾಲ್ ಬಾಬು ಧ್ವಜ ಸ್ವೀಕರಿಸುವ ಮೂಲಕ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ. ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡಿನಿಂದ ಆರಂಭಗೊಳ್ಳುವ ಜಾಥಾ ವಿವಿಧ ಜಿಲ್ಲೆಗಳ ಮೂಲಕ ಸಂಚರಿಸಿ, ಫೆ. 14ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ. ವಿವಿಧ ಕೇಂದ್ರಗಳಲ್ಲಿ ಜಾಥಾಕ್ಕೆ ಸ್ವಾಗತ, ಸಾರ್ವಜನಿಕ ಸಭೆ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ವಲಾವುದ್ದೀನ್.ಪಿ.ಎಂ, ಕೆ. ಅನಸ್, ಕೆ ಬಿಲಾಲ್ ಬಾಬು, ಮಹಮ್ಮದ್ ಬಶೀರ್ ಕೆ.ಕೆ ಉಪಸ್ಥಿತರಿದ್ದರು.
ನಾಗರಿಕ ಸೆವೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಂರಕ್ಷಣೆಗಾಗಿ 'ಎಎಸ್‍ಇಟಿ'ಯಿಂದ ಜಾಥಾ
0
ಜನವರಿ 27, 2023
Tags