ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸವಾಮಿ ದರ್ಶನಕ್ಕಾಗಿ ಕಾಸರಗೋಡಿನಿಂದ ತೆರಳಿದ್ದ ಕುಡ್ಲು ನಿವಾಸಿ ನವೀನ್(47)ಅಳುದೆ ಸನಿಹ ಹ್ರದಯಾಘಾಥದಿಂದ ಸಾವಿಗೀಡಾಗಿದ್ದಾರೆ. ಮೃತದೇಃವನ್ನು ಕೋಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಶವಮಹಜರು ನಡೆಸಿದ ಬಳಿಕ ಕಾಸರಗೋಡಿಗೆ ಕರೆತರುವ ಸಾಧ್ಯತೆಯಿದೆ.
ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಯ್ಯಪ್ಪ ವ್ರತಧಾರಿಗಳ ನೇತೃತ್ವದ 84ಮಂದಿಯನ್ನೊಳಗೊಂಡ ತಂಡದೊಂದಿಗೆ ನವೀನ್ ತೆರಳಿದ್ದರು. ಎರುಮೇಲಿ ವರೆಗೆ ಬಸ್ಸಿನಲ್ಲಿ ತೆರಳಿದ ಇವರು, ನಂತರ ಪಾರಂಪರಿಕ ಕಾನನ ಹಾದಿಯಾಗಿ ಸನ್ನಿಧಾನ ತೆರಳುವ ಮಧ್ಯೆ ಅಳುದೆ ಸನಿಹ ಮುಕ್ಕುಳಿ ಎಂಬಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ನವೀನ್ ಅವರು ಕಾಸರಗೋಡಿನಲ್ಲಿ ಎ.ಸಿ, ವಾಷಿಂಗ್ ಮೆಶಿನ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಶಬರಿಮಲೆ ಯಾತ್ರೆ ಮಧ್ಯೆ ಕಾಸರಗೋಡು ನಿವಾಸಿ ಹೃದಯಾಘಾತದಿಂದ ಮೃತ್ಯು
0
ಜನವರಿ 11, 2023
Tags