ಕಣ್ಣೂರು: ಪಯ್ಯನ್ನೂರು ಚಿತ್ರವಯಲ್ ಕುರುಂಬಕಾವ್ ಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಮನೆಗಳ ಮೇಲೆ ಕಾಂಗ್ರೆಸ್ ದಾಳಿ ನಡೆಸಿದೆ.
ದಾಳಿಯಲ್ಲಿ ಆರ್‍ಎಸ್‍ಎಸ್ ಗಾಂಧಿ ಶಿಕ್ಷಣ ಪ್ರಮುಖ್ ಸಿಟಿಕೆ ಅನೀಶ್ ಮತ್ತು ಮಂಡಲ ಕಾರ್ಯವಾಹ್ ಅತುಲ್ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅನೀಶ್ ಅವರ ಮನೆಗೂ ಹಾನಿಯಾಗಿದೆ.
ಅನೀಶ್ ಅವರ ಸಹೋದರಿ ಮತ್ತು ಇತರ ಇಬ್ಬರು ಆರ್‍ಎಸ್‍ಎಸ್ ಕಾರ್ಯಕರ್ತರ ತಾಯಂದಿರೂ ಗಾಯಗೊಂಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಸಂಘಟಿತರಾದ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಪ್ರಚೋದನೆ ಇಲ್ಲದೆ ಹಿಂಸಾಚಾರ ನಡೆಸಿದ್ದಾರೆ ಎಂದು ಹಿಂಸಾಚಾರದಲ್ಲಿ ಗಾಯಗೊಂಡವರು ಹೇಳಿದ್ದಾರೆ.
ಗಾಯಾಳುಗಳನ್ನು ತಲಶ್ಶೇರಿ ಮತ್ತು ಪಾನೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪಾನೂರು ಮಂಡಲ ಪ್ರಮುಖ್ ಸಿಟಿಕೆ ಅನೀಶ್ ಮೇಲೆ ಕಾಂಗ್ರೆಸ್ ದಾಳಿ: ತಲೆಗೆ ಗಾಯ: ಇತರೆಡೆಗಳಲ್ಲೂ ದಾಳಿ
0
ಜನವರಿ 16, 2023