ಕಾಸರಗೋಡು: ಜಿಲ್ಲೆಯ ಎಲ್ಲಾ ಮನೆಗಳು, ವ್ಯಾಪಾರಿ ಸಂಸ್ಥೆ, ಉದ್ದಿಮೆಗಳ ವಿದ್ಯುತ್ ಮೀಟರ್‍ಗಳು ಒಂದು ವರ್ಷದೊಳಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಆಗಿ ಬದಲಾಗಲಿದೆ. ಕಾಸರಗೋಡು ವಿದ್ಯುತ್ ಡಿವಿಶನ್ ಹೊರತಾಗಿ ತಿರುವನಂತಪುರ,ಕಳಕ್ಕೂಟಂ, ಎರ್ನಾಕುಳಂ, ತೃಪ್ಪುಣಿತ್ತುರ, ಆಲುವಾ, ಕೋಯಿಕ್ಕೋಡ್, ಕಣ್ಣೂರು, ಪಾಲಕ್ಕಾಡ್, ತಿರೂರಂಗಾಡಿ ಡಿವಿಶನ್‍ಗಳಲ್ಲೂ ಸ್ಮಾರ್ಟ್ ವಿದ್ಯುತ್ ಮೀಟರ್ ಯೋಜನೆ ಜಾರಿಯಾಗಲಿದೆ.
ಈ ಎಲ್ಲ ಡಿವಿಶನ್‍ಗಳೂ ಇಲಾಖೆಗೆ ಹೆಚ್ಚಿನ ಲಾಭ ತಂದುಕೊಡುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಗೆ ಯೋಜನೆ ತಯಾರಿಸಲಾಗಿದೆ.ಮೊದಲ ಹಂತದಲ್ಲಿ 37ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಲಾಗುವುದು. ಎಲ್ಲಾ ಸರ್ಕಾರಿ ಕಚೇರಿಗಳು, ಲೋ ಹಾಗೂ ಹೈ ಟೆನ್ಶನ್ ವಿದ್ಯುತ್ ಬಳಕೆ ಸಂಸ್ಥೆಗಳಲ್ಲಿ ಮೊದಲ ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ. ಇದರ ಹೊರತಾಗಿ 11ಕೆ.ವಿ ವಿದ್ಯುತ್ ಲೈನ್‍ಗಳು, ಟ್ರಾನ್ಸ್ಫಾರ್ಮರ್‍ಗಳಿಂದ ವಿದಯುತ್ ಪೂರೈಕೆಯಾಘುವ ಪ್ರಧಾನ ಕೇಂದ್ರಗಳಲ್ಲೂ ಮೊದಲ ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲಾಗುವುದು. ಯೋಜನೆ ಜಾರಿಗೆ ಆರ್.ಇ.ಸಿ ಪವರ್ ಡೆವೆಲಪ್‍ಮೆಂಟ್ ಆ್ಯಂಡ್ ಕನ್ಸಲ್ಟೆನ್ಸಿ ಲಿಮಿಟೆಡ್(ಆರ್‍ಇಸಿಪಿಡಿಸಿಎಲ್)ಜತೆ ವುದ್ಯುನ್ಮಂಡಳಿ ಒಪ್ಪಂದಕ್ಕೂ ಸಹಿ ಹಾಕಿದೆ. ರಾಜ್ಯಾದ್ಯಂತ ಮಾಸಿಕ 200ಯೂನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸುವತ್ತಿರುವ ಬಳಕೆದಾರರಿಗೆ ಸ್ಮಾರ್ಟ್ ಮೀಟರ್ ಪೂರೈಸಲು ವಿದ್ಯುನ್ಮಂಡಳಿ ಚಿಂತನೆ ನಡೆಸಿದೆ.
ಜಿಲ್ಲೆಯಲ್ಲಿ ಸ್ಮಾರ್ಟ್ ಆಗಲಿರುವ ವಿದ್ಯುತ್ ಮೀಟರ್ ಗಳು
0
ಜನವರಿ 14, 2023
Tags