ಶ್ರೀನಗರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊಯಾತ್ರೆಯು ದೇಶದ ಮೂಲೆ ಮೂಲೆಯಲ್ಲಿ ಪ್ರೀತಿಯ ಸಂದೇಶವನ್ನು ಹರಡಿದೆ. ರಾಷ್ಟ್ರವನ್ನು ಮುನ್ನೆಡೆಸಲು ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಹೇಳಿದ್ದಾರೆ.
'ಇಂದು ನಮಗೆಲ್ಲರಿಗೂ ಐತಿಹಾಸಿಕ ಕ್ಷಣ, ಕೋಟ್ಯಂತರ ನಾಗರಿಕರ ಬೆಂಬಲದೊಂದಿಗೆ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಅಂತಿಮ ಗಮ್ಯ ತಲುಪಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಪ್ರೀತಿಯ ಸಂದೇಶವು ದೇಶದ ಮೂಲೆ ಮೂಲೆಯನ್ನು ತಲುಪಿದೆ. ನಾವು ಪ್ರೀತಿಯ ಸಂದೇಶದೊಂದಿಗೆ ದೃಢವಾಗಿ ಉಳಿಯಬೇಕು ಮತ್ತು ದೇಶವನ್ನು ಮುನ್ನಡೆಸಲು ಒಂದಾಗಬೇಕು' ಎಂದು ಶ್ರೀನಗರದ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಬಳಿಕ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿ, ದೇಶದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 75 ಜಿಲ್ಲೆಗಳನ್ನು ಒಳಗೊಂಡಿದೆ.