ಕಾಸರಗೊಡು: ಸಮಾಜದಲ್ಲಿ ದುರಿತ ಅನುಭವಿಸುತ್ತಿರುವವರಿಗೆ ಸಹಾಯ ಒದಗಿಸುವಲ್ಲಿ ಸಂಘಟನೆಗಳು ನೆರವಾಗಬೇಕು ಎಂಬುದಾಗಿ ಚಿತ್ರನಟ ಉಣ್ಣಿರಾಜ್ ಚೆರುವತ್ತೂರು ತಿಳಿಸಿದ್ದಾರೆ. ಅವರು ಉದುಮ ಎರೋಲ್ ಪ್ಯಾಲೇಸ್‍ನಲ್ಲಿ ನಡೆದ ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 1994-95 ನೇ ಸಾಲಿನ ವಿದ್ಯಾರ್ಥಿಗಳ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
'ಕ್ಲಾಸ್ ಮೇಟ್' ಸಿನಿಮಾ ಬಿಡುಗಡೆಯಾದ ನಂತರ ಪೂರ್ವ ವಿದ್ಯಾರ್ಥಿಗಳ ಸಂಘಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಲಭಿಸುವಂತಾಗಿದೆ ಎಂದು ತಿಳಿಸಿದರು. ಸಂಘಟನೆ ಅಧ್ಯಕ್ಷ ಕೃಷ್ಣದಾಸ್ ವೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ವಿಶಾಲಾಕ್ಷನ್, ಚಿತ್ರನಟಿ ಮಿನಿಶೈನ್, ಮಾಧ್ಯಮ ಪ್ರಶಸ್ತಿ ಪಡೆದ ವಿಜಯರಾಜ್ ಉದುಮ ಅವರನ್ನು ಗೌರವಿಸಲಾಯಿತು. ಸಂಘಟನಾ ಸಮಿತಿ ಅಧ್ಯಕ್ಷ ಬಶೀರ್ ಪಾಕಿಯಾರ ಸ್ವಾಗತಿಸಿದರು. ಸಂಚಾಲಕ ಸಿ.ಕೆ.ರಂಜಿತ್ ಕುಮಾರ್ ವಂದಿಸಿದರು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ವೈ.ಕೃಷ್ಣದಾಸ್ (ಅಧ್ಯಕ್ಷ), ಬಶೀರ್ ಪಾಕ್ಯಾರ, ಬಿ.ಪಿ.ಬೀನಾ (ಉಪಾಧ್ಯಕ್ಷರು), ಕೆ.ರಾಮದಾಸ್ ನಲಾವದುಕ್ಕಲ್ (ಕಾರ್ಯದರ್ಶಿ), ಸಿ.ಕೆ.ರಂಜಿತ್ ಕುಮಾರ್, ಎನ್.ಎನ್.ಲತಿಕಾ (ಜತೆ ಕಾರ್ಯದರ್ಶಿಗಳು), ಕೆ.ಎಂ.ಹಸೈನಾರ್ (ಕೋಶಾಧಿಕಾರಿ) ಆಯ್ಕೆಯಾದರು.
ವೈ.ಕೃಷ್ಣದಾಸ್