ತಿರುವನಂತಪುರಂ: ಪಾರಶಾಲಾ ಶರೋನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ರಸಿತ್ ಅವರು ನೆಯ್ಯಾಟ್ಟಿಂಗರ ಸೆಷನ್ಸ್ ನ್ಯಾಯಾಲಯಕ್ಕೆ ದೋμÁರೋಪ ಪಟ್ಟಿ ಸಲ್ಲಿಸಿದ್ದಾರೆ.
ಗ್ರೀಷ್ಮಾ ತನ್ನ ಪ್ರಿಯಕರ ಶರೋನ್‍ನನ್ನು ಔಷಧಿಗೆ ವಿಷ ಬೆರೆಸಿ ಹತ್ಯೆಗೈದಿದ್ದಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಚಾರ್ಜ್ ಶೀಟ್ ಪ್ರಕಾರ ತಾಯಿ ಸಿಂಧು ಮತ್ತು ಚಿಕ್ಕಪ್ಪ ನಿರ್ಮಲ್ ಕುಮಾರನ್ ನಾಯರ್ ಸಾಕ್ಷ್ಯ ನಾಶಪಡಿಸಿದ್ದಾರೆ.
ಅವರು ಪ್ರಕರಣದಲ್ಲಿ ಎರಡನೇ ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಗ್ರೀಷ್ಮಾ ಬಂಧನವಾಗಿ 85ನೇ ದಿನಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಶರೋನ್ ಪ್ರಕರಣದ ವಿಚಾರಣೆಯನ್ನು ಕೇರಳದಲ್ಲಿಯೇ ನಡೆಸಬಹುದು ಎಂಬ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೆಯ್ಯಾಟಿಂಗರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಅಕ್ಟೋಬರ್ 14ರಂದು ತಮಿಳುನಾಡಿನ ಪಲುಕಲ್ ನಲ್ಲಿರುವ ತನ್ನ ಮನೆಯಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್ ಗೆ ವಿಷ ನೀಡಿದ್ದಳು. ಚಿಕಿತ್ಸೆ ಪಡೆಯುತ್ತಿದ್ದಾಗ ಶರೋನ್ ನವೆಂಬರ್ 25 ರಂದು ನಿಧನರಾದರು. ಆರಂಭದಲ್ಲಿ ಪಾರಶಾಲ ಪೋಲೀಸರು ಶರೋನ್ ಸಾವು ಸಹಜ ಎಂಬ ತೀರ್ಮಾನಕ್ಕೆ ಬಂದಿದ್ದರು. ಕುಟುಂಬದವರ ದೂರಿನ ಮೇರೆಗೆ ವಿಶೇಷ ತಂಡ ನಡೆಸಿದ ವಿಚಾರಣೆ ವೇಳೆ ಗ್ರೀಷ್ಮಾ ತಪೆÇ್ಪಪ್ಪಿಕೊಂಡಿದ್ದಾಳೆ.
ಗ್ರೀಷ್ಮಾ ವಿಷ ನೀಡಿ ಪ್ರಿಯಕರನನ್ನು ಹತ್ಯೆಗೈದಳು: ತಾಯಿ ಮತ್ತು ಚಿಕ್ಕಪ್ಪನಿಂದ ಸಾಕ್ಷ್ಯ ನಾಶ: ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ
0
ಜನವರಿ 25, 2023