ತಿರುವನಂತಪುರಂ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ರಾಜ್ಯ ಸರ್ಕಾರ ಪಿಂಚಣಿ ವಯಸ್ಸನ್ನು ಹೆಚ್ಚಿಸಲು ಮುಂದಾಗಿದೆ.
ಸರ್ಕಾರಿ ನೌಕರರು ಮತ್ತು ಶಿಕ್ಷಕರ ಪಿಂಚಣಿ ವಯಸ್ಸನ್ನು 57ಕ್ಕೆ ಹೆಚ್ಚಿಸಬೇಕು. ಈ ಮೂಲಕ 4,000 ಕೋಟಿ ಉಳಿತಾಯ ಮಾಡಬಹುದು ಎಂದು ಸರ್ಕಾರ ಅಂದಾಜಿಸಿದೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯಾಗುವ ಸೂಚನೆ ಇದೆ. ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಪಿಂಚಣಿ ವಯಸ್ಸನ್ನು ಹೆಚ್ಚಿಸುವ ಬಗ್ಗೆಯೂ ಪರಿಗಣನೆಯಲ್ಲಿದೆ.
ಒಟ್ಟು 5.15 ಲಕ್ಷ ಸರ್ಕಾರಿ ನೌಕರರ ಪೈಕಿ 1.48 ಲಕ್ಷ ಮಂದಿ ಸಹಭಾಗಿತ್ವ ಪಿಂಚಣಿ ಯೋಜನೆಗೆ ಒಳಪಟ್ಟಿದ್ದಾರೆ. ಪಿಂಚಣಿ ವಯೋಮಿತಿ ಹೆಚ್ಚಿಸಿದರೆ ಉಳಿದ 3.67 ಲಕ್ಷ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ಪಿಂಚಣಿ ವಯಸ್ಸು 60 ವರ್ಷಗಳು.
ರಾಜ್ಯ ಬಜೆಟ್‍ಗೂ ಮುನ್ನ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ನೌಕರರ ಸಂಘಟನೆಗಳೊಂದಿಗೆ ಪಿಂಚಣಿ ವಯೋಮಿತಿ ಕುರಿತು ಸಭೆ ನಡೆಸಿರುವರು. ಮೂರು ತಿಂಗಳ ಹಿಂದೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಪಿಂಚಣಿ ವಯೋಮಿತಿಯನ್ನು 60ಕ್ಕೆ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಎಬಿವಿಪಿ ಸೇರಿದಂತೆ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರಕಾರ ತನ್ನ ನಿರ್ಧಾರವನ್ನು ಹಿಂಪಡೆದಿತ್ತು.
ಬೊಕ್ಕಸ ಖಾಲಿ; ಪಿಂಚಣಿ ವಯಸ್ಸು ಏರಿಸುತ್ತಾ ಸರ್ಕಾರ?
0
ಜನವರಿ 21, 2023