HEALTH TIPS

ಶೀಘ್ರದಲ್ಲೇ ಬರಲಿದೆ ವಾಟ್ಸ್‌ಆಯಪ್‌ ಸ್ಟೇಟಸ್‌ಗೆ ಹೊಸ ಫೀಚರ್‌: ಏನದು?

Top Post Ad

Click to join Samarasasudhi Official Whatsapp Group

Qries

 

               ಸ್ಯಾನ್‌ಫ್ರಾನ್ಸಿಸ್ಕೊ: ಆಗಾಗ ಬಳಕೆದಾರರಿಗೆ ಯೂಸರ್ ಫ್ರೆಂಡ್‌ಲಿ ಫೀಚರ್‌ಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ವಾಟ್ಸ್‌ಆಯಪ್ ಒಂದು ಜನಪ್ರಿಯ ಮೆಸೆಂಜರ್ ಆಗಿದೆ.

               ಇದೀಗ ವಾಟ್ಸ್‌ಆಯಪ್ ಮತ್ತೊಂದು ಹೊಸ ಫೀಚರ್‌ ಅನ್ನು ತನ್ನ ಬಳಕೆದಾರರಿಗೆ ಹೊತ್ತು ತಂದಿದೆ.

                ವಾಟ್ಸ್‌ಆಯಪ್‌ನಲ್ಲಿ ಸ್ಟೇಟಸ್‌ ಹಾಕುವುದು ಬಹಳ ಜನರಿಗೆ ಇಷ್ಟವಾದ ಫೀಚರ್. ಇದರಲ್ಲಿ ಟೆಕ್ಸ್ಟ್‌ ಹಾಕುವುದು, ವಿಡಿಯೊ ಹಾಕುವುದು, ಇಮೋಜಿ ಹಾಕುವುದು ಸದ್ಯ ಇರುವಂತದ್ದು.

                 ಇದೀಗ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಆಡಿಯೊ ಕ್ಲಿಪ್‌ನ್ನು ಕೂಡ ಅಪ್ಲೋಡ್ ಮಾಡುವ ಫೀಚರ್‌ ಅನ್ನು ವಾಟ್ಸ್‌ಆಯಪ್ ಪರಿಚಯಿಸುತ್ತಿದೆ ಎಂದು 'ವಾಬೀಟಾಇನ್ಫೊ' ವರದಿ ಮಾಡಿದೆ.

                  ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲ ಬಳಕೆದಾರರಿಗೆ ಮುಕ್ತವಾಗಿ ಸಿಗಲಿದೆ ಎಂದು ತಿಳಿಸಿದೆ. ಈ ಫೀಚರ್ ಬಂದರೆ ಬಳಕೆದಾರರು 30 ಸೆಕೆಂಡ್‌ನ ಆಡಿಯೊ ಕ್ಲಿಪ್‌ ಅನ್ನು ಸ್ಟೇಟಸ್‌ ರೂಪದಲ್ಲಿ ಹಾಕಿಕೊಳ್ಳಬಹುದಾಗಿದೆ ಮತ್ತು ಅತ್ಯಂತ ಹೆಚ್ಚು ಖಾಸಗಿತನವನ್ನು ಕಾಪಾಡಿಕೊಳ್ಳಬಹುದಾದ ಅವಕಾಶವನ್ನು ಇದು ಒದಗಿಸುತ್ತಿದೆ.

                ಕಳೆದ ತಿಂಗಳು ವಾಟ್ಸ್‌ಆಯಪ್ ನೂತನ ಅಪ್‌ಡೇಟ್‌ನಲ್ಲಿ ಅವತಾರ್ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಲಾಗಿತ್ತು. ಈಗಾಗಲೇ ಎಮೋಜಿ, ಸ್ಟಿಕರ್ಸ್ ಮತ್ತು ಜಿಫ್ ಬಳಸುತ್ತಿರುವವರಿಗೆ, ಅವತಾರ್ ಹೊಸದಾಗಿ ಲಭ್ಯವಾಗಿದೆ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries