ಮುಂಬೈ: ಈ ಹಿಂದೆ ಮಹಾರಾಷ್ಟ್ರ ಸರ್ಕಾರದಿಂದ ನಿವಷೇಧಕ್ಕೊಳಗಾಗಿದ್ದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಬೇಬಿ ಪೌಡರ್ ತಯಾರಿಕೆ ಮತ್ತು ಮಾರಾಟಕ್ಕೆ ಬಾಂಬೇ ಹೈಕೋರ್ಟ್ ಅನುಮತಿ ನೀಡಿದೆ.
ಅಸುರಕ್ಷಿತ ಮತ್ತು ಆರೋಗ್ಯದ ಮೇಲೆ ಹಾನಿಕಾರಕ ಎಂಬ ಕಾರಣ ನೀಡಿ ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಜಾನ್ಸನ್ ಮತ್ತು ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟಕ್ಕೆ ನಿಷೇಧ ಹೇರಿತ್ತು. ಈ ನಿರ್ಧಾರದ ವಿರುದ್ಧ ಜಾನ್ಸನ್ ಮತ್ತು ಜಾನ್ಸನ್ ಸಂಸ್ಛೆ ಬಾಂಬೇ ಹೈಕೋರ್ಟ್ ಮೆಟ್ಟಿಲೇರಿತ್ತು.. ಇದೀಗ ಇದರ ವಿಚಾರಣೆ ನಡೆಸಿ ತೀರ್ಪು ನೀಡಿರುವ ಬಾಂಬೇ ಹೈಕೋರ್ಟ್ ಪರವಾನಿಗೆಯನ್ನು ಹಿಂತೆಗೆದುಕೊಳ್ಳುವ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಕಠಿಣವೆಂದು ಪರಿಗಣಿಸಿ ರದ್ದುಗೊಳಿಸಿದೆ.
ಸೋಮವಾರ, ಮಹಾರಾಷ್ಟ್ರದಲ್ಲಿ ಕಂಪನಿಯ ಬೇಬಿ ಪೌಡರ್ ತಯಾರಿಕೆಯ ಬಗ್ಗೆ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಕೋರ್ಟ್ ತೀರ್ಪು ಪ್ರಕಟಿಸಿದ್ದು, 'ಇದು ಸುರಕ್ಷಿತ ಅಥವಾ ಅಸುರಕ್ಷಿತ ಎಂದು ನಾವು ಹೇಳುತ್ತಿಲ್ಲ, ನಾವು ನಿಮ್ಮ ಕ್ರಮವನ್ನು ಪರೀಕ್ಷಿಸುತ್ತಿದ್ದೇವೆ, ನೀವು ರಕ್ಷಣಾತ್ಮಕ ಕ್ರಮದಲ್ಲಿ ಸರಿಯಾಗಿ ವರ್ತಿಸಿದ್ದೀರಿ ಎಂದು ನೀವು ಸಮರ್ಥಿಸಿಕೊಳ್ಳಬೇಕು. ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಔಷಧೀಯ ಉತ್ಪನ್ನಗಳೊಂದಿಗೆ ನೀವು ಜಾಗರೂಕರಾಗಿರಲು ನಾವು ಬಯಸುತ್ತೇವೆ ಎಂದು ನ್ಯಾಯಾಲಯ ಸರ್ಕಾರಕ್ಕೆ ಹೇಳಿದೆ.
ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ನೀವು ತ್ವರಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದೆ.
ಈ ಹಿಂದಿನ ವಿಚಾರಣೆಯಲ್ಲಿ 'ನೀವು ಸೌಂದರ್ಯವರ್ಧಕಗಳು, ವಿಶೇಷವಾಗಿ ಔಷಧಿಗಳೊಂದಿಗೆ ವ್ಯವಹರಿಸುತ್ತಿರುವ ಕಾರಣ ನೀವು ಸಮಯದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ತಿಂಗಳು, ವರ್ಷಗಟ್ಟಲೆ ವಿಳಂಬ ಸಲ್ಲದು. ಸವಾಲುಗಳಿದ್ದಾಗ ನೀವು ಕಾರ್ಯನಿರ್ವಹಿಸಬೇಕಾದ ವೇಗವನ್ನು ನಾವು ನಿಗದಿಪಡಿಸುತ್ತೇವೆ’’ ಎಂದು ನ್ಯಾಯಪೀಠವು ಆಹಾರ ಮತ್ತು ಔಷಧಿ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಉತ್ಪಾದಿಸುವ ಬೇಬಿ ಪೌಡರ್‌ನಲ್ಲಿ ಪಿಎಚ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚು ಇರುವುದು ಪತ್ತೆಯಾದ ಬಳಿಕ ಮುಂಬೈಯ ಮುಲುಂದ್ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟದ ಲೈಸೆನ್ಸ್ ರದ್ದುಗೊಳಿಸುವ ಆಹಾರ ಮತ್ತು ಔಷಧಿ ಪ್ರಾಧಿಕಾರದ 2022ರ ಸೆಪ್ಟಂಬರ್‌ನ ನಿರ್ಧಾರವನ್ನು ಪ್ರಶ್ನಿಸಿ ಜಾನ್ಸನ್ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ದ್ವಿಸದಸ್ಯ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಜಾನ್ಸನ್ ಸಂಸ್ಥೆ ಮುಲುಂದ್‌ನ ಫ್ಯಾಕ್ಟರಿಯಲ್ಲಿ ಬೇಬಿ ಪೌಡರ್ ಉತ್ಪಾದಿಸಬಹುದು, ಆದರೆ ಮಾರಾಟ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ನವೆಂಬರ್ 16ರಂದು ಸೂಚಿಸಿತ್ತು.