ತ್ರಿಶೂರ್: ಶಾಲಾ ಮೈದಾನಕ್ಕೆ ಹಾರಿ ಬಂದ ಕಣಜಗಳ ಹಿಂಡಿನ ಹಠಾತ್ ದಾಳಿಗೆ ಹಲವು ವಿದ್ಯಾಥಿÀ್ಗಳು ಗಾಯಗೊಂಡಿದ್ದಾರೆ.
ತ್ರಿಶೂರಿನ ಪಾವರಟ್ಟಿಯಲ್ಲಿ ಈ ಘಟನೆ ನಡೆದಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾವರಟಿ ಕ್ರೈಸ್ಟ್ ಕಿಂಗ್ ಕಾನ್ವೆಂಟ್ ಬಾಲಕಿಯರ ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ನಡೆದಿದೆ. ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಗಾಯ ಗಂಭೀರವಾಗಿಲ್ಲ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಕಣಜಗಳ ಹಿಂಡು ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ: ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ
0
ಜನವರಿ 05, 2023