ಕಾಸರಗೋಡು: ಪರಿಶಿಷ್ಟ ಪಂಗಡದ ಹೆಚ್ಚಿನ ಯುವಕರನ್ನು ಮುಖ್ಯವಾಹಿನಿಗೆ ತರಲು ಜಿಲ್ಲಾಡಳಿತ ಕೈಗೊಂಡಿರುವ ಚಟುವಟಿಕೆಗಳ ಭಾಗವಾಗಿ ಉದ್ಯೋಗಾವಕಾಶಗಳ ಬಗ್ಗೆ ಮತ್ತು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ಪರಿಶಿಷ್ಟ ಪಂಗಡಗಳ ವಿಭಾಗದಿಂದ ತಾತ್ಕಾಲಿಕವಾಗಿ ಕನ್ನಡ ಅನುವಾದಕರನ್ನು ನೇಮಿಸಲಾಗುವುದು.
ವಿದ್ಯಾರ್ಹತೆ ಪದವಿ, ಕನ್ನಡ-ಮಲಯಾಳಂ ಭಾμÁಂತರ ಜ್ಞಾನ. ಪತ್ರಿಕೋದ್ಯಮ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುವುದು. ವಯಸ್ಸಿನ ಮಿತಿ 20 ರಿಂದ 45 ವರ್ಷಗಳ ನಡುವೆ ಇರುತ್ತದೆ. ನೇಮಕಾತಿ ಅವಧಿಯು ಜನವರಿ 2023 ರಿಂದ ಮಾರ್ಚ್ 31, 2024 ರವರೆಗೆ ಇರುತ್ತದೆ. ತಿಂಗಳಿಗೆ 10000 ಗೌರವಧನ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು 4ನೇ ಜನವರಿ 2023 ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯಲ್ಲಿ ಅರ್ಜಿ, ಅರ್ಹತಾ ಪ್ರಮಾಣಪತ್ರಗಳ ಮೂಲಪ್ರತಿ (ಪ್ರತಿಯನ್ನು ಇಟ್ಟುಕೊಳ್ಳಬೇಕು) ಮತ್ತು ಕೆಲಸದ ಅನುಭವವನ್ನು ತೋರಿಸುವ ಪ್ರಮಾಣಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ದೂರವಾಣಿ 04994 255466.
ಕನ್ನಡ ಅನುವಾದಕರ ಹುದ್ದೆಗೆ ಸಂದರ್ಶನ
0
ಜನವರಿ 01, 2023