ಕುಂಬಳೆ: ಸಹಾಯ ಮಾಡುವ ನೆಪದಲ್ಲಿ ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣ ಹಾಗೂ ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ದೂರಲಾಗಿದೆ. ಉಪ್ಪಳ ಸೋಂಕಾಲ್ ಪ್ರತಾಪ್ ನಗರದ ಸುಹಾರಾ ತನ್ನ ನೆರೆಮನೆಯ ಹಾಜಿರ ಮತ್ತು ಆಕೆಯ ಪತಿ ಮತ್ತು ಸಹೋದರನ ವಿರುದ್ಧ ದೂರು ನೀಡಿದ್ದಾಳೆ.
ಮೂರು ತಿಂಗಳ ಹಿಂದೆ ಇμರ್Áದ್ ಅವರ 11 ಪವನ್ ಚಿನ್ನವನ್ನು ಕೆನರಾ ಬ್ಯಾಂಕ್, ಕೇರಳ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್‍ಗಳಲ್ಲಿ ಸುಹಾರಾ ಹೆಸರಿನಲ್ಲಿದ್ದ ಖಾತೆಗಳಿಗೆ ಜಮಾ ಮಾಡಿ 3,50,000 ರೂ.ಸಾಲ ಪಡೆಯಲಾಗಿತ್ತು. ಬಳಿಕ ಈ ಆಭರಣಗಳನ್ನು ಬ್ಯಾಂಕ್‍ನಿಂದ ಹಿಂಪಡೆಯಲು ಸಹಾಯ ಮಾಡುವ ನೆಪದಲ್ಲಿ ಹಾಜಿರಾ ಮತ್ತು ಅವರ ಸಂಬಂಧಿಕರು ಬ್ಯಾಂಕಿನಿಂದ ಬಲವಂತವಾಗಿ ಚಿನ್ನ ಬಿಡಿಸಿದ್ದರು. ಚಿನ್ನಾಭರಣ ನಕಲಿ ಎಂದು ಬೆದರಿಸಿ ದಾಖಲೆಗಳನ್ನು ವಶಪಡಿಸಿರುವುದಾಗಿ ಸುಹರಾ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸುಹಾರಾ ಹಾಗೂ ಅವರ ಸಂಬಂಧಿ ಅಬೂಬಕ್ಕರ್ ಉಪಸ್ಥಿತರಿದ್ದರು.
ಸಹಾಯ ಮಾಡುವ ನೆಪದಲ್ಲಿ ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದ ಚಿನ್ನ ಮತ್ತು ದಾಖಲೆಗಳ ಕಳವು: ದೂರು
0
ಜನವರಿ 03, 2023