HEALTH TIPS

ಅಯ್ಯಪ್ಪ ಮಂದಿರ ನಿರ್ಮಾಣಕ್ಕೆ ಭಕ್ತಜನರ ಸಹಕಾರ ಅಗತ್ಯ: ಬದಿಯಡ್ಕದಲ್ಲಿ ನೂತನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ನಿಧಿಸಮರ್ಪಣೆ


          ಬದಿಯಡ್ಕ: ಅಯ್ಯಪ್ಪ ಭಕ್ತರಿಗಾಗಿ ಮಂದಿರ ನಿರ್ಮಾಣಗೊಳ್ಳುತ್ತಿರುವುದರಿಂದ ನಾಡಿನಲ್ಲಿ ಧಾರ್ಮಿಕ ಚಟುವಟಿಕೆಗಳು ಹಸಿರಾಗಿ ಮುಂದುವರಿಯಲು ಸಹಾಯಕವಾಗಲಿದೆ. ಭಕ್ತಜನರ ಸಹಕಾರದಿಂದ ನಿರ್ಮಾಣ ಕಾರ್ಯಗಳು ಅತಿಶೀಘ್ರದಲ್ಲಿ ನಡೆಯಲಿ ಎಂದು ಧಾರ್ಮಿಕ ಮುಂದಾಳು ಕಾಸರಗೋಡಿನ ಉದ್ಯಮಿ ಕೆ.ಸುರೇಶ ಅಭಿಪ್ರಾಯಪಟ್ಟರು.
          ಬದಿಯಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಅಯ್ಯಪ್ಪ ಮಂದಿರದ ಶಿಲಾನ್ಯಾಸ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
         ನಿರ್ಮಾಣ ಸಮಿತಿಯ ರಕ್ಷಾಧಿಕಾರಿ ಬಿ.ವಸಂತ ಪೈ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಧಾರ್ಮಿಕ ಮುಂದಾಳು, ರಕ್ಷಾಧಿಕಾರಿ ಮಧುಸೂದನ್ ಆಯರ್ ಮಂಗಳೂರು, ರಕ್ಷಾಧಿಕಾರಿಗಳಾದ ಬಿ ಗೋಪಾಲಕೃಷ್ಣ ಪೈ, ಶಂಕರನಾರಾಯಣ ಮಯ್ಯ, ಶಂಕರನಾರಾಯಣ ಭಟ್ ಪೆರುಮುಂಡ, ಗೌರವ ಸಲಹೆಗಾರರಾದ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಸಿ.ಯಚ್. ರಾಜೇಶ್ ಮಾಸ್ತರ್ ಚಂಬಲ್ತಿಮಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬದಿಯಡ್ಕ ವಲಯದ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಗುರುಸ್ವಾಮಿಗಳಾದ ಬಾಲಕೃಷ್ಣ ಮಣಿಯಾಣಿ, ಪಿ.ಬಿ. ರಮೇಶ ಆಚಾರ್ಯ, ನಾರಾಯಣ ಮಣಿಯಾಣಿ ಮೊಳೆಯಾರು, ಕುಂಞÂಕಣ್ಣ ಗುರುಸ್ವಾಮಿ, ಸುಬ್ರಹ್ಮಣ್ಯ ಆಚಾರ್ಯ, ವಿವಿಧ ಸಂಘಸಂಸ್ಥೆಗಳ ಮುಖಂಡರುಗಳಾದ ಸಂತೋಷ್ ಕುಮಾರ್ ಮಾಸ್ತರ್ ಪಿ.ಎಸ್., ಹರಿಪ್ರಸಾದ ರೈ ಪುತ್ರಕÀಳ, ಜ್ಞಾನದೇವ ಶೆನೈ ಬದಿಯಡ್ಕ, ವಾಸ್ತುಶಿಲ್ಪಿ ಗೋಪಾಲ ಆಚಾರಿ ಚಂದ್ರಂಪಾರೆ, ಭಾಸ್ಕರ ಗುರುಸ್ವಾಮಿ, ಕುಞÂ್ಞಕಣ್ಣ ಗುರುಸ್ವಾಮಿ ಚಂದ್ರಂಪಾರೆ, ಉದಯ ಭಟ್ ಕೋಡಿಕ್ಕಲ್, ರವಿ ನವಶಕ್ತಿ, ದೇವದಾಸ ಕಾಮತ್ ಬದಿಯಡ್ಕ, ಮಾತೃಸಮಿತಿಯ ಪ್ರತಿಭಾ ಬಿ., ಯುವಜನ ಸಮಿತಿಯ ಸುಹಾಸ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಅಯ್ಯಪ್ಪ ಸೇವಾಟ್ರಸ್ಟ್‍ನ ಅಧ್ಯಕ್ಷ ನರೇಂದ್ರ ಬಿ.ಎನ್. ಸ್ವಾಗತಿಸಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ವಳಮಲೆ ವಂದಿಸಿದರು. ಕೋಶಾಧಿಕಾರಿ ಗುರುಪ್ರಸಾದ ರೈ. ಕೆ. ನಿರೂಪಿಸಿದರು. ಬೆಳಗ್ಗೆ 12 ನಾಳಿಕೇರ ಮಹಾಗಣಪತಿ ಹೋಮ, ಭೂಪರಿಗ್ರಹಪೂಜೆ ನಡೆಯಿತು. ಬ್ರಹ್ಮಶ್ರೀ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ ಇವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. 10.48ರ ಸುಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಭೇಟಿಯನ್ನಿತ್ತು ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries