ಸಮರಸ ಚಿತ್ರಸುದ್ದಿ: ಕಾಸರಗೋಡು: ರಾಜಸ್ಥಾನದ ಜೈಪುರದ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ನಡೆದ 6ನೇ ಭಾರತೀಯ ವಿಶ್ವವಿದ್ಯಾನಿಲಯ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ 580 ಕೆಜಿ ಮಿಶ್ರ ವಿಭಾಗದಲ್ಲಿ ಕಣ್ಣೂರು ತಂಡ ಪ್ರಶಸ್ತಿ ಗೆದ್ದುಕೊಂಡಿತು. ಪ್ರಶಸ್ತಿಗೆದ್ದು ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ವಿಶ್ವ ವಿದ್ಯಾಲಯ ತಂಡಕ್ಕೆ ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಎ. ಅಶೋಕ್ ಕುಮಾರ್, ಎಂ.ಸಿ ರಾಜು, ಸ್ಪೋಟ್ರ್ಸ್ ವಿಭಾಗದ ಜೋ ಜೋಸೆಫ್, ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ರಮಾ, ಪ್ರವೀಣ್ ಮಾಸ್ತರ್, ಎಂ.ಎನ್.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಕುಸ್ತಿ ಚಾಂಪಿಯನ್ಚಿಪ್ ನಲ್ಲಿ ಗೆಲುವು: ಕಾಸರಗೋಡಲ್ಲಿ ಸ್ವಾಗತ
0
ಜನವರಿ 20, 2023