ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿದ ಯುವಜನ ಸಂಗೀತೋತ್ಸವ ಸದಾ ಎನ್ನ ಹೃದಯದಲ್ಲಿ ಕಾರ್ಯಕ್ರಮದಲ್ಲಿ ವಿದ್ವಾನ್ ಉಪೇಂದ್ರ ಮಲ್ಯ ಅವರಿಗೆ ಗೌರವ ಪುರಸ್ಕಾರ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ನೇತ್ರ ತಜ್ಞ ಡಾ.ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಮಂಗಳೂರಿನ ಉದ್ಯಮಿ ನರೇಂದ್ರ ನಾಯಕ್, ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಛತ್ರಪತಿ ಶಿವಾಜಿ ಪ್ರಭು, ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ, ನಿರ್ದೇಶಕ ಕೆ.ಸತೀಶ್ಚಂದ್ರ ಭಂಡಾರಿ, ನಿರ್ದೇಶಕ ಕೆ.ಸತ್ಯನಾರಾಯಣ, ವಿದ್ಯಾಕರ ಮಲ್ಯ, ಉದಯ ಮನ್ನಿಪ್ಪಾಡಿ, ನಾಗಕಿರಣ್ ನಾಯಕ್, ವಿದುಷಿ ಶಾಂತೇರಿ ಕಾಮತ್, ವರುಣ್ ಮಲ್ಯ, ರಿಷಬ್ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.
ವಿದ್ವಾನ್ ಉಪೇಂದ್ರ ಮಲ್ಯ ಅವರಿಗೆ ಗೌರವ ಪುರಸ್ಕಾರ
0
ಜನವರಿ 18, 2023