ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಚಟ್ಟಂಚಾಲಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಂಟೈನರ್ ವಾಹನದಲ್ಲಿ ಸರಕು ಸಾಗಾಟದ ಮರೆಯಲ್ಲಿ ಸಾಗಿಸುತ್ತಿದ್ದ 31800ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ವಿಜಯಪುರ ಗಾಂಧಿಚೌಕ್ ನಿವಾಸಿ ಸಿದ್ಧಲಿಂಗಪ್ಪ(39)ಎಂಬಾತನನ್ನು ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನ ಅವರ ಉಸ್ತುವಾರಿಯಲ್ಲಿ ಕಾರ್ಯಾಚರಿಸುತ್ತಿರುವ ಕ್ಲೀನ್ ಕಾಸರಗೋಡು ಯೋಜನೆಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಮಂಗಳೂರಿನಿಂದ ಕೊಚ್ಚಿಗೆ ಸರಕು ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ಗುಪ್ತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಚಾಲಕನ ಕ್ಯಾಬಿನ್ ಮತ್ತು ಸೀಟಿನಡಿ ತಂಬಾಕು ಉತ್ಪನ್ನಗಳನ್ನು ಚೀಲದಲ್ಲಿ ತುಂಬಿ ಅವಿತಿರಿಸಲಾಗಿತ್ತು. ಮಂಗಳೂರಿನ ಒಬ್ಬ ವ್ಯಕ್ತಿ ತಂಬಾಕು ಉತ್ಪನ್ನ ನೀಡಿದ್ದು, ಕೋಯಿಕ್ಕೋಡಿಗೆ ತಲುಪುವಾಗ ಈ ಪಾರ್ಸೆಲ್ ಪಡೆದುಕೊಳ್ಳಳು ಒಬ್ಬ ವ್ಯಕ್ತಿ ಆಗಮಿಸಲಿದ್ದಾನೆ ಎಂದು ಮಂಗಳೂರಿನ ವ್ಯಕ್ತಿ ತಿಳಿಸಿರುವುದಾಗಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದನೆ. ಇದಕ್ಕಾಗಿ ತನಗೆ 3ಸಾವಿರ ರೂ. ಪ್ರತಿಫಲ ಲಭಿಸುವುದಾಗಿಯೂ ತಿಳಿಸಿದ್ದನು. ಈ ಹಿಂದೆಯೂ ಇದೇ ರೀತಿ ತಂಬಾಕು ಉತ್ಪನ್ನ ಸಾಗಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನಿಡಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಟದಿಕಾರಿ ನಿರ್ದೇಶಾನುಸಾರ ಘನ ವಾಹನಗಳಲ್ಲೂ ತಪಾಸಣೆ ಚುರುಕುಗೊಳಿಸಲಾಗಿದೆ.
ಕಂಟೈನರ್‍ನಲ್ಲಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ತಂಬಾಕು ಉತ್ಪನ್ನ ವಶ, ಚಾಲಕ ಬಂಧನ
0
ಜನವರಿ 03, 2023
Tags