ಕಾಸರಗೋಡು: ಚರ್ಮಗಂಟು ರೋಗ ಸೇರಿದಂತೆ ಜಾನುವಾರುಗಳಿಗೆ ವಿವಿಧ ವೈರಸ್‍ಬಾಧೆ ತಗಲುತ್ತಿರುವ ಹಿನ್ನೆಲೆಯಲ್ಲಿ ಹೈನುಗಾರರು ಜಾಗ್ರತೆ ಪಾಲಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸಊಚನೆ ನೀಡಿದ್ದಾರೆ. ನೊಣಗಳು, ಜಿಗಣೆ, ಚೆಳ್ಳು ( ನಾಯಿ ಹೇನು), ಉಣ್ಣಿ ಮತ್ತು ಸೊಳ್ಳೆ ಎಂಬೀ ಕೀಟಗಳ ಮೂಲಕ ಹಸುಗಳಿಗೆ ವೈರಸ್ ಹರಡುತ್ತಿದ್ದು, ಇವುಗಳನ್ನು ನಾಶಗೊಳಿಸುವುದು ಪ್ರಧಾನವಾದ ಅಂಶವಾಗಿದೆ.
ಜಾನುವಾರುಗಳಲ್ಲಿ ಇಂತಹ ವೈರಸ್‍ಬಾಧೆ ಕಂಡುಬಂದಲ್ಲಿ ಸನಿಹದ ಮೃಗಾಸ್ಪತ್ರೆಯನ್ನು ಸಂಪರ್ಕಿಸಿ ಇದನ್ನು ನಾಶ ಪಡಿಸುವ ಮಾರ್ಗಗಳನ್ನು ತಿಳಿದು ಕೊಳ್ಳಬೇಕು. ಜಾನುವಾರುಗಳನ್ನು ಬಿಗಿಯುವ ಹಟ್ಟಿಯ ಬಳಿ ನೀರು ಕಟ್ಟಿ ನಿಲ್ಲುವುದಂತೆ ಜಾಗ್ರತೆ ವಹಿಸಬೇಕು.
ಯಾವುದಾದರೂ ಹಸುವಿಗೆ ರೋಗಲಕ್ಷಣ ಕಂಡು ಬಂದರೆ, ಇದರಿಂದ ಇತರ ಹಸುಗಳನ್ನು ಬೇರ್ಪಡಿಸಬೇಕು. ಸೊಳ್ಳೆ ಪರದೆಯಂತಹ ವ್ಯವಸ್ಥೆಯನ್ನೂ ಬಳಸಬೇಕು. ಒಂದು ಹಸುವಿನ ಹಾಲು ಕರೆದ ನಂತರ ಅಣು ವಿಮುಕ್ತ ಗೊಳಿಸಿದ ನಂತರವೇ ಇನ್ನೊಂದು ಹಸುವಿನ ಬಳಿ ಹಾಲು ಕರೆಯಲು ತೆರಳಬೇಕು. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಹೊಸದಾಗಿ ಹಸುಗಳನ್ನು ಖರೀದಿಸುವುದನ್ನು ತತ್ಕಾಲಿಕವಾಗಿ ಮುಂದೂಡಬೇಕು. ಜನುವಾರುಗಳಲ್ಲಿ ಯಾವುದೇ ರೋಗಲಕ್ಷಣ ಕಂಡು ಬಂದರೂ, ಸನಿಹದ ಪಶುವೈದ್ಯರಿಗೆ ವರದಿ ಮಾಡುವಂತೆಯೂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನುವಾರುಗಳಿಗೆ ವೈರಸ್ ಬಾಧೆ: ಹೈನುಗಾರರು ಜಾಗ್ರತೆ ಪಾಲಿಸುವಂತೆ ಸೂಚನೆ
0
ಜನವರಿ 19, 2023
Tags