"ಸರ್ವೇಂದ್ರಿಯಂ ನಯನಂ ಪ್ರಧಾನಂ" ಎಂಬ ಮಾತು ಸರ್ವ ಸಮ್ಮತವಾದದ್ದು. ಆದರೆ ಹೆಚ್ಚಿನ ಜನರು ನಿರ್ಲಕ್ಷ್ಯ ಮಾಡುವ ಅಂಗವೇ ಕಣ್ಣು. ಇದರಿಂದ ಕಣ್ಣುಗೆ ಹಾನಿ ಎಂಧು ತಿಳಿಸಿದ್ದರೂ ಹೆಚ್ಚು ಮೊಬೈಲ್, ಟಿವಿ ನೋಡುವುದು, ಹೆಚ್ಚಿದ ಸಮಯ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಮತ್ತು ಸರಿಯಾಗಿ ನಿದ್ರೆ ಮಾಡದೇ ಇರುವುದು ಇದೆಲ್ಲಾ ಕಣ್ಣನ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.
ಇಷ್ಟೇ ಅಲ್ಲದೆ, ನಾವು ನಿತ್ಯ ಮಾಡುವ ಇಂಥಾ ತಪ್ಪುಗಳು ಕಣ್ಣಿಗೆ ತುಂಬಾನೆ ಅಪಾಯಕಾರಿ. ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಲು ತಪ್ಪಿಸಬಹುದಾದ ಕೆಲವು ತಪ್ಪುಗಳನ್ನು ಪಟ್ಟಿ ಇಲ್ಲಿದೆ ನೋಡಿ:
ಕಣ್ಣು ತೊಳೆಯಲು ಬೆಚ್ಚಗಿನ ನೀರನ್ನು ಬಳಸುವುದು
ನಮ್ಮಲ್ಲಿ ಹಲವರಿಗೆ ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ತೊಳೆಯುವ ಅಭ್ಯಾಸವಿದೆ, ಆದರೆ ಇದು ಸೂಕ್ತವಲ್ಲ. ಕಣ್ಣುಗಳು ಶಾಖದ ಸ್ಥಾನವಾಗಿದೆ ಆದ್ದರಿಂದ, ಅವುಗಳನ್ನು ಕೋಣೆಯ ಉಷ್ಣಾಂಶದ ನೀರು ಅಥವಾ ತಣ್ಣನೆಯ ನೀರಿನಿಂದ ತೊಳೆಯಬೇಕು.
ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸದೆ ಇರುವುದು
ಕಣ್ಣಿನ ಆಯಾಸವನ್ನು ತಪ್ಪಿಸಲು ಮಿಟುಕಿಸುವುದು ಅತ್ಯಂತ ಪ್ರಮುಖ ಕಾಳಜಿಯಾಗಿದೆ. ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸುವುದರಿಂದ ಇದು ಕಣ್ಣುಗಳಿಗೆ ವಿರಾಮವನ್ನು ನೀಡುವುದಲ್ಲದೆ, ಕಣ್ಣುಗಳು ಒಣಗದಂತೆ ತಡೆಯುತ್ತದೆ ಹಾಗೂ ವಿಷವನ್ನು ಶುದ್ಧೀಕರಿಸುತ್ತದೆ. ಮೊಬೈಲ್ ಅಥವಾ ಇತರ ಗ್ಯಾಜೆಟ್‌ಗಳನ್ನು ಬಳಸುವಾಗ ಆಗಾಗ್ಗೆ ಕಣ್ಣುಗಳನ್ನು ಪ್ರಜ್ಞಾಪೂರ್ವಕವಾಗಿ ಮಿಟುಕಿಸಲು ಪ್ರಯತ್ನಿಸಿ.
ಕೃತಕ ಕಣ್ಣಿನ ಹನಿ/ ಐ ಡ್ರಾಪ್ಸ್‌ಗಳನ್ನು ಅತಿಯಾಗಿ ಬಳಸುವುದು
ಯಾವುದೇ ರೀತಿಯ ನೋವು ಅಥವಾ ಕಿರಿಕಿರಿಯಿಂದ ತ್ವರಿತ ಪರಿಹಾರಕ್ಕಾಗಿ ಅನೇಕ ಜನರು ಕಣ್ಣಿನ ಹನಿ/ಐ ಡ್ರಾಪ್ಸ್‌ಗಳನ್ನು ಅತಿಯಾಗಿ ಬಳಸುತ್ತಾರೆ. ಅಲ್ಪಾವಧಿಯಲ್ಲಿ ಅವು ಪ್ರಯೋಜನಕಾಯಾದರೂ, ದೀರ್ಘಾವಧಿಯಲ್ಲಿ ಅವು ನಿಮ್ಮ ಕಣ್ಣುಗಳನ್ನು ಇನ್ನಷ್ಟು ಒಣಗಿಸಬಹುದು. ತಜ್ಞರ ಪ್ರಕಾರ ದೀರ್ಘಕಾಲದ ಅತ್ಯುತ್ತಮ ಕಣ್ಣಿನ ಹನಿಗಳು ಯಾವಾಗಲೂ ತೈಲ ಆಧಾರಿತವಾಗಿರುತ್ತದೆ.
ಮಲಗಲು ಕಣ್ಣಿನ ಮುಖವಾಡಗಳನ್ನು ಬಳಸುವುದು
ಸೌಂದರ್ಯ ಕಾಳಜಿ ಇರುವವರು ಹಾಗೂ ತಮ್ಮ ತ್ವಚೆಯ ಆರೈಕೆಯನ್ನು ಇಷ್ಟಪಡುವವರು ಕಣ್ಣಿನ ಮುಖವಾಡ (ಮಾಸ್ಕ್)ಗಳನ್ನು ಅನಿವಾರ್ಯವಾಗಿ ಬಳಸುತ್ತಾರೆ. ಈ ಹಾಟ್ ಕಂಪ್ರೆಸ್ ಐ ಮಾಸ್ಕ್‌ಗಳು ತಕ್ಷಣ ಆರಾಮವನ್ನು ನೀಡಬಹುದಾದರೂ ಈ ಅಭ್ಯಾಸವು ಕಣ್ಣುಗಳಿಗೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಕಣ್ಣುಗಳು ಯಾವಾಗಲು ಮುಕ್ತವಾಗಿರಲಿ ಮತ್ತು ರಾತ್ರಿಯಲ್ಲಿ ಅದು ಉಸಿರಾಡುವಂತಿರಬೇಕು.
ಕಣ್ಣುಗಳನ್ನು ಉಜ್ಜುವುದು
ಇದು ನಮ್ಮ ಪ್ರಜ್ಞಾಹೀನ ಅಭ್ಯಾಸವಾಗಿದ್ದರೂ ನಾವೆಲ್ಲರೂ ಈ ಅಭ್ಯಾಸ ಬಿಡುವುದರಲ್ಲಿ ವಿಫಲರಾಗಿದ್ದೇವೆ. ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜುವುದು ಕಣ್ಣಿನ ಆರೋಗ್ಯಕ್ಕೆ ಅಪಾಯಕಾರಿಯೇ. ನಮ್ಮ ಕಣ್ಣುಗಳು ಅವುಗಳನ್ನು ರಕ್ಷಿಸುವ ಕಾಂಜಂಕ್ಟಿವಾದ ತೆಳುವಾದ ಪದರವನ್ನು ಹೊಂದಿವೆ ಮತ್ತು ಅದನ್ನು ಅತಿಯಾಗಿ ಉಜ್ಜಿದರೆ ಹಾನಿಗೊಳಗಾಗಬಹುದು. ಉಜ್ಜುವ ಬದಲು ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಬಹುದು.