ಉಪ್ಪಳ: ಎರ್ನಾಕುಳಂನಲ್ಲಿ ನಡೆದ ಲೆಜೆಂಡ್ ಮರಡೋನಾ ಕಪ್, ರಾಜ್ಯ ಮಟ್ಟದ 15 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಟಿಜನ್ ಉಪ್ಪಳ ತಂಡ ಎನ್. ಎನ್. ಎಂ. ಎಚ್. ಎಸ್. ಎಸ್ ಚಲೆಂಬ್ರಾ ವಿರುದ್ಧ ಪರಾಭವಗೊಂಡರೂ ತಂಡ ಅತ್ಯಂತ ಹೆಮ್ಮೆಯ ಪ್ರದರ್ಶನ ನೀಡಿತು.
ಮೊದಲ ಪಂದ್ಯದಲ್ಲಿ ಡಬ್ಲ್ಯು. ಆರ್. ಎಸ್ ಎರ್ನಾಕುಳಂ ತಂಡವನ್ನು 8 ಗೋಲುಗಳಿಂದ ಮತ್ತು ಸ್ಪ್ಯಾರೋಸ್ ತ್ರಿಶೂರ್ ತಂಡವನ್ನು 5 ಗೋಲುಗಳಿಂದ ಪರಾಭವಗೊಳಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ಮೂರು ಗೋಲುಗಳನ್ನು ಕಳೆದುಕೊಂಡಿತು.
ಎರ್ನಾಕುಳಂ ಉದ್ಯೋಗಮಂಡಲ್ ಫ್ಯಾಕ್ಟ್ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಎರ್ನಾಕುಳಂನ ಸಾಕೋ ಸ್ಪೋಟ್ರ್ಸ್ ಅಕಾಡೆಮಿಯು ರಾಜ್ಯ ಸರ್ಕಾರದ 'ವಿಮುಕ್ತಿ ಮಿಷನ್' ಸಹಯೋಗದೊಂದಿಗೆ ಆಯೋಜಿಸಿತ್ತು. ಪಂದ್ಯಾವಳಿಯಲ್ಲಿ ಹದಿನಾಲ್ಕು ಜಿಲ್ಲೆಗಳಿಂದ 32 ತಂಡಗಳು ಭಾಗವಹಿಸಿದ್ದವು. ಕಾಸರಗೋಡಿನ ಸಿಟಿಜನ್ ಉಪ್ಪಳ ಅಲ್ಲದೆ ಟಿ. ಎಫ್. ಎ ತ್ರಿಕರಿಪುರ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಸಿಟಿಜನ್ ಉಪ್ಪಳ ತಂಡ ಮೂರು ಪಂದ್ಯಗಳಲ್ಲಿ ಹದಿಮೂರು ಗೋಲು ಗಳಿಸಿ ಕೇವಲ ಮೂರು ಗೋಲುಗಳಲ್ಲಿ ಪರಾಭವಗೊಂಡಿತು.
ಲೆಜೆಂಡ್ ಮರಡೋನಾ ಕಪ್; ಜಿಲ್ಲೆಗೆ ಹೆಮ್ಮೆ ಮೂಡಿಸಿದ ಸಿಟಿಜನ್ ಉಪ್ಪಳ
0
ಜನವರಿ 06, 2023
Tags