ಪೆರ್ಲ: ಗಡಿ ಪ್ರದೇಶದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಅಡಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗ, ಹಳದಿ ರೋಗ, ತಿರಿ ಕೊಳೆ ರೋಗದ ಬಗ್ಗೆ ಅಧ್ಯಯನ ನಡೆಸಲು ಕಾಸರಗೋಡು ಸಿ.ಪಿ.ಸಿ.ಆರ್.ಐ ಕೇಂದ್ರದ ವಿಜ್ಞಾನಿಗಳು ಬೆದ್ರಂಪಳ್ಳ ಸಮೀಪದ ನಡುಬೈಲ್ ನಲ್ಲಿರುವ ಶ್ರೀಧರ್ ಮಾಸ್ತರ್ ಕುಕ್ಕಿಲ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಸ್ಥಳದಿಂದ ಮಣ್ಣು ಹಾಗೂ ಹಾನಿಕಾರಕ ಕೀಟಗಳನ್ನು ಸಂಗ್ರಹಿಸಿದ ಇವರು ರೋಗದ ವಿರುದ್ಧ ಪರ್ಯಾಯ ವ್ಯವಸ್ಥೆ ಪ್ರಯೋಗಕ್ಕೆ ಸೂಕ್ತ ಮಾಹಿತಿ ನೀಡಿದರು. ಸಿಪಿಸಿಆರ್ ಐಯ ವಿಜ್ಞಾನಿಗಳಾದ ಡಾ.ಪ್ರತಿಭ
ಾ, ಡಾ.ರಾಜ್ ಕುಮಾರ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸರಿತಾ ಹೆಗ್ಡೆ ಸ್ಥಳ ಸಂದರ್ಶನ ನಿಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ನಾರಾಯಣ ಭಟ್ ಕನ್ನಟಿಕಾನ, ಶ್ರೀಧರ ಮಾಸ್ತರ್ ಉಪಸ್ಥಿತರಿದ್ದರು.