ಪರವೂರು: ಎರ್ನಾಕುಳಂ ಪರವೂರಿನಲ್ಲಿ ವಿಷಾಹಾರಕ್ಕೊಳಗಾಗಿ 33 ಮಂದಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಪರವೂರ್ ಮಜ್ಲಿಸ್ ಹೋಟೆಲ್ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಆಯುಕ್ತರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಪರವೂರಿನ ಮಜ್ಲಿಸ್ ಹೋಟೆಲ್‍ನಿಂದ ಆಹಾರ ವಿಷಗೊಂಡು 33 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಡ್ ಪಾಯ್ಸನ್ ಆದ ಬಗ್ಗೆ ತಾಲೂಕು ಆಸ್ಪತ್ರೆಯವರು ಮಾಹಿತಿ ನೀಡಿದ ನಂತರ ನಗರಸಭೆ ಅಧಿಕಾರಿಗಳು ಬಂದು ಹೋಟೆಲ್ ಮುಚ್ಚಿಸಿದರು. ಅದರ ನಂತರ, ಪರವಾನಗಿಯನ್ನು ರದ್ದುಗೊಳಿಸಲಾಯಿತು.
ಇಬ್ಬರು ಮಕ್ಕಳು ಸೇರಿದಂತೆ 33 ಮಂದಿ ಜನರಿಗೆ ಆಹಾರ ವಿಷವಾಗಿದೆ. ತೀವ್ರ ವಾಂತಿ, ಭೇದಿ ಕಾಣಿಸಿಕೊಂಡಿದೆ. ಅವರನ್ನು ಮೊದಲು ಪರವೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. 9 ಮಂದಿ ಕುನ್ನುಕರ ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳು. ಚಿಂತಾಜನಕ ಸ್ಥಿತಿಯಲ್ಲಿದ್ದ ಚೆರೈ ಮೂಲದ ಗೀತು ಅವರನ್ನು ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. 26 ಮಂದಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಪರವೂರು ಕೆಎಂಕೆ ಆಸ್ಪತ್ರೆಯಲ್ಲಿ, ಮೂವರು ವೈಪಿನ್‍ನ ಶ್ರೇಯಸ್ ಆಸ್ಪತ್ರೆಯಲ್ಲಿ ಮತ್ತು ಒಬ್ಬರು ಕಲಮಸ್ಸೆರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಾಹಾರ ಅಸ್ವಸ್ಥತೆ: ಪರವೂರಿನ ಮಜ್ಲಿಸ್ ಹೋಟೆಲ್ ಪರವಾನಿಗೆ ರದ್ದು: ಸಚಿವೆ: ಹೋಟೆಲ್ ಮುಚ್ಚುಗಡೆ
0
ಜನವರಿ 17, 2023
Tags