ಪೆರ್ಲ : ಶೇಷ ಪ್ರಕಾಶನ ಖಂಡಿಗೆ -ಪೆರ್ಲ ಇದರ ಆಶ್ರಯದಲ್ಲಿ
ಉದಯೋನ್ಮುಖ ಕವಯಿತ್ರಿ ನಿರ್ಮಲಾ ಶೇಷಪ್ಪ ಕುಲಾಲ್ ಖಂಡಿಗೆ ಅವರ 'ಮಣ್ಣ್ ದ ರುಣೊ'ಚೊಚ್ಚಲ ತುಳು ಕವನ ಸಂಕಲನ ಬಿಡುಗಡೆ ಸಮಾರಂಭ ಜ.5ಕ್ಕೆ ಶ್ರೀಧಾಮ ಮಾಣಿಲದಲ್ಲಿ ಜರಗಲಿದೆ. ಅಂದು ಬೆಳಗ್ಗೆ 10.30 ಕ್ಕೆ ಜರಗುವ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ, ಮಾಣಿಲ ಅವರು ಕೃತಿ ಲೋಕಾರ್ಪಣೆಗೊಳಿಸುವರು.
ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆ ವಹಿಸುವರು. ತುಳು, ಕನ್ನಡ ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು ಕೃತಿ ಪರಿಚಯಿಸುವರು. ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ಮಂಗಳೂರು ಆಕಾಶವಾಣಿಯ ನಿರೂಪಕ ಪ್ರವೀಣ್ ಅಮ್ಮೆಂಬಳ, ಕುಲಾಲ ಸಮಾಜ ಎಣ್ಮಕಜೆ ಪಂಚಾಯತಿ ಸಮಿತಿ ಅಧ್ಯಕ್ಷ ಸೀತಾರಾಮ ಒಳಮೊಗರು, ಎಣ್ಮಕಜೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್ ಶುಭಾಶಂಸನೆಗೈಯುವರು. ಕೃತಿಗಾರ್ತಿ ನಿರ್ಮಲಾ ಶೇಷಪ್ಪ ಕುಲಾಲ್ ಖಂಡಿಗೆ ಉಪಸ್ಥಿತರಿರುವರು. ಬಳಿಕ ಜರಗುವ ಕವಿಗೋಷ್ಠಿಗೆ ವ್ಯಂಗ್ಯಚಿತ್ರಗಾರ, ಕವಿ, ವೆಂಕಟ್ ಭಟ್ ಎಡನೀರು ಚಾಲನೆ ನೀಡುವರು. ಗುಣಾಜೆ ರಾಮಚಂದ್ರ ಭಟ್, ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ, ಪ್ರೇಮಾ ಮುಲ್ಕಿ, ಉಮೇಶ್ ಶಿರಿಯಾ, ಸುಭಾμï ಪೆರ್ಲ, ಪ್ರಮೀಳಾ ಚುಳ್ಳಿಕಾನ, ರಿತೇಶ್ ಕಿರಣ್ ಕಾಟುಕುಕ್ಕೆ, ಶ್ವೇತಾ ಕಜೆ,ಹಿತೇಶ್ ಕುಮಾರ್ ನೀರ್ಚಾಲ್, ರೂಪಶ್ರೀ ಮಾಣಿಲ ಮೊದಲಾದ ಕವಿಗಳು ಭಾಗವಹಿಸುವರು.
ಕಾರ್ಯಕ್ರಮದಂಗವಾಗಿ ಗಡಿನಾಡ ಕೋಗಿಲೆ ವಸಂತ ಬಾರಡ್ಕ ಅವರ ನೇತೃತ್ವದಲ್ಲಿ ವಿವಿಧ ಗಾಯಕ-ಗಾಯಕಿಯರಿಂದ ಭಾವಗಾನ ಪ್ರಸ್ತುತಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.