HEALTH TIPS

'ಭಾರತದಲ್ಲಿರುವ ಸಂಶೋಧಕರ ಸಂಖ್ಯೆ ಅತ್ಯಲ್ಪ'

 

             ನಾಗ್ಪುರ: ಭಾರತದಲ್ಲಿ 10 ಲಕ್ಷ ಜನರಿಗೆ ಕೇವಲ 255 ಸಂಶೋಧಕರು ಇದ್ದಾರೆ ಎಂದು ಪ್ರಧಾನಿಯವರ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್‌ ಕುಮಾರ್‌ ಸೂದ್‌ ಅವರು ಹೇಳಿದ್ದಾರೆ.

          ಇಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತವು ಸ್ಪರ್ಧಾತ್ಮಕವಾಗಿ ಮುಂದುವರಿಯಬೇಕು ಎಂದರೆ ರಾಜ್ಯ ಸರ್ಕಾರಗಳು ಈ ಕ್ಷೇತ್ರಕ್ಕೆ ಹಣ ಒದಗಿಸಬೇಕು.

                  ರಾಷ್ಟ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ₹45.000 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ ರಾಜ್ಯ ಸರ್ಕಾರಗಳ ಪಾಲು ಕೇವಲ ಶೇ 6.4, ಕೇಂದ್ರ ಸರ್ಕಾರದ ಪಾಲು ಶೇ 45.5 ಮತ್ತು ಉದ್ಯಮಗಳ ಕೊಡುಗೆ ಶೇ 36.8 ಎಂದರು.

               ಜಾಗತಿಕ ಜ್ಞಾನ ಸೂಚಕ- 2020ರಲ್ಲಿ (ಜಿಕೆಐ) ಭಾರತವು 44.4 ಅಂಕಗಳನ್ನು ಪಡೆಯುವ ಮೂಲಕ 138 ದೇಶಗಳ ಪೈಕಿ 75ನೇ ರ‍್ಯಾಂಕ್‌ ಪಡೆದಿದೆ. ಜಾಗತಿಕ ಸರಾಸರಿ ಅಂಕ 46.7 ಇದ್ದು, ಭಾರತ ಕಡಿಮೆ ಅಂಕ ಗಳಿಸಿದೆ ಎಂದರು.

                ಅಮೆರಿಕವು 10 ಲಕ್ಷ ಜನರಿಗೆ 4,245 ಸಂಶೋಧಕರನ್ನು ಹೊಂದಿದೆ. ದಕ್ಷಿಣ ಕೊರಿಯಾ ಮತ್ತು ಬ್ರಿಟನ್‌ 10 ಲಕ್ಷ ಜನರಿಗೆ ಕ್ರಮವಾಗಿ 7,498 ಮತ್ತು 4,341 ಸಂಶೋಧಕರನ್ನು ಹೊಂದಿದೆ ಎಂದರು.

                ಸ್ಟಾರ್ಟ್‌ಅಪ್‌ಗಳ ಕುರಿತು ಮಾತನಾಡಿದ ಅವರು, ಸುಮಾರು 77,000 ಸ್ಟಾರ್ಟ್‌ಅಪ್‌ಗಳನ್ನು ಹೊಂದುವ ಮೂಲಕ ಭಾರತವು ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಎಂದು ಕರೆಸಿಕೊಂಡಿದೆ. ಆದರೆ ಕೇವಲ 3,000 ಸ್ಟಾರ್ಟ್‌ಅಪ್‌ಗಳು ಮಾತ್ರ ತಂತ್ರಜ್ಞಾನ ಆಧರಿತ ಸ್ಟಾರ್ಟ್‌ಅಪ್‌ಗಳಾಗಿವೆ. ಅವುಗಳಲ್ಲಿ ಕೇವಲ 400 ಸ್ಟಾರ್ಟ್‌ಅಪ್‌ಗಳು ಹೊಸ ಆವಿಷ್ಕಾರ ಆಧರಿತ ತಂತ್ರಜ್ಞಾನ ಕುರಿತು ಕೆಲಸ ಮಾಡುತ್ತಿವೆ ಎಂದರು.

            ರಾಷ್ಟ್ರೀಯ ವಿಜ್ಞಾನ ಯೋಜನೆಗೆ ವಿದ್ಯಾರ್ಥಿಗಳು ಕೊಡುಗೆ ನೀಡುವ ನಿಟ್ಟಿನಲ್ಲಿ ರಾಜ್ಯಗಳ ವಿಶ್ವವಿದ್ಯಾಲಯಗಳು ಸುಧಾರಣೆ ತರಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಸ್‌. ಚಂದ್ರಶೇಖರ್‌ ಅವರು ಈ ವೇಳೆ ಒತ್ತಾಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries