HEALTH TIPS

ರೈಲಿನಲ್ಲಿ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡುತ್ತಿದ್ದ ವ್ಯಕ್ತಿಯ ಬಂಧನ!

 

                ನಾಗ್​ಪುರ್​: ಪುಣೆ-ಹೌರಾ ಆಜಾದ್ ಹಿಂದ್ ಎಕ್ಸ್‌ಪ್ರೆಸ್‌ನ ಪ್ಯಾಂಟ್ರಿ ಕಾರ್ ಮ್ಯಾನೇಜರ್‌ನನ್ನು ಎಲ್‌ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ನಾಗಪುರ ಆರ್‌ಪಿಎಫ್ (ರೈಲ್ವೇ ಪೊಲೀಸ್​ ಫೋರ್ಸ್​) ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.

                 ಶುಕ್ರವಾರ ರೈಲ್ವೇ ರಕ್ಷಣಾ ಪಡೆ ತಂಡ ಪ್ಯಾಂಟ್ರಿ ಕಾರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿರುವುದನ್ನು ಗಮನಿಸಿದೆ. ಈ ಪ್ರಕರಣದಲ್ಲಿ ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಆರ್‌ಪಿಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಆರೋಪಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ರೈಲ್ವೆ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

                   ಅಂದಹಾಗೆ ರೈಲಿನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಸಾಗಿಸುವಂತಿಲ್ಲ. ಈ ನಿಯಮವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂದರೆ ವಾಹಗಳನ್ನು ಅಥವಾ ಬೈಕ್​ಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡುವಾಗ ಇಂಧನ ಟ್ಯಾಂಕ್​ನಲ್ಲಿ ಒಂದೇ ಒಂದು ಹನಿ ಪೆಟ್ರೋಲ್​/ಡಿಸೇಲ್​ ಕೂಡ ಇರದಂತೆ ನೋಡಿಕೊಳ್ಳಲಾಗುತ್ತದೆ. ಇದನ್ನು ಖಾತ್ರಿ ಪಡಿಸಲಿಕ್ಕಾಗಿ ಎಂದೇ ಓರ್ವ ಸಿಬ್ಬಂದಿ ಇರುತ್ತಾರೆ.

                   ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗೆ ಜೋಡಿಸಲಾದ ಎಲ್ಲಾ ಪ್ಯಾಂಟ್ರಿ ಕಾರ್‌ಗಳಲ್ಲಿ ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಈಗಾಗಲೇ ವಲಯ ರೈಲ್ವೇಗಳಿಗೆ ಕೇಳಿಕೊಂಡಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries