ರಿಷಬ್
ಶೆಟ್ಟಿ (Rishab Shetty) ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ಕಾಂತಾರ
(Kantara) ಸಿನಿಮಾ ಕನ್ನಡ ಚಿತ್ರರಂಗದಲ್ಲಿ 2022ರ ಬಿಗ್ ಹಿಟ್. ಹೊಂಬಾಳೆ ಫಿಲ್ಮ್ಸ್
(Hombale Films) ತಯಾರಿಸಿದ ಈ ಸಿನಿಮಾ ಭರ್ಜರಿ ಲಾಭ ಗಳಿಸಿದ
ಸಿನಿಮಾದಲ್ಲಿದ್ದವರಿಗೆಲ್ಲ ಫೇಮ್ ತಂದುಕೊಟ್ಟಿದೆ.
ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನು ಮಾಡಿದವರೂ ಕೂಡಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಸಿನಿಮಾದ ಕ್ರೇಜ್ ಸಖತ್ತಾಗಿದೆ. ಈ ಕಾಂತಾರ ಮೋಡಿಗೆ ಒಳಗಾಗದವರೇ ಇಲ್ಲ. ಎಲ್ಲರೂ
ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಇದೀಗ ಅಭಿಮಾನಿಯೊಬ್ಬರು ಕಾಂತಾರ ಸಿನಿಮಾವನ್ನು
ಹೊಗಳಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ.
ಅಭಿಮಾನಿಗಳು ಕಾಂತಾರಕ್ಕೆ ಸಂಬಂಧಿಸಿ ಬಹಳಷ್ಟು ಪೋಸ್ಟ್, ಟ್ವೀಟ್, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಸ್ವಲ್ಪ ಸ್ಪೆಷಲ್. ಇದರಲ್ಲಿ ನಟ ರಿಷಬ್ ಅವರಿಗೆ ಅಭಿನಂದನೆ ತಿಳಿಸಲಾಗಿದೆ.
ಕಾಂತಾರ ಡಿಜಿಟಲ್ ಪೋಸ್ಟರ್
ಡಿಜಿಟಲ್ ಆರ್ಟ್ ಎಂದ ಮೇಲೆ ಸಹಜವಾಗಿಯೇ ಆಕರ್ಷಕವಾಗಿರುತ್ತದೆ. ಸ್ವಲ್ಪ ಗಾಢ ಬಣ್ಣ ಕಾನ್ಸೆಪ್ಟ್ ಇದ್ದರೆ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಅದರಂತೆಯೇ ಕಾಂತಾರ ಪೋಸ್ಟರ್ ಡಿಜಿಟಲ್ ಆರ್ಟ್ ತುಂಬಾ ಸುಂದರವಾಗಿ ಮೂಡಿ ಬಂದಿದೆ.
ಸ್ಪೇಸ್ ಕಾಸ್ಟರ್ ಎಂಬ ಅಭಿಮಾನಿ
ಸ್ಪೇಸ್ ಕಾಸ್ಟರ್ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟರ್ ಫೋಟೋಗಳನ್ನು ಶೇರ್ ಮಾಡಲಾಗಿದೆ. ಅದನ್ನು ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರೂ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಈ ಪೋಸ್ಟರ್ ಡಿಸೈನ್ ಮಾಡಿದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಷ್ಟೆ. ಅದ್ಭುತ ಸಿನಿಮಾಟೋಗ್ರಫಿ ಹಾಗೂ ಬ್ರಿಲಿಯಂಟ್ ಸಿನಿಮಾವನ್ನು ಈಗಾಗಲೇ ನೋಡಿದ್ದೇನೆ. ನೋಡುತ್ತಿದ್ದೇನೆ, ಇನ್ನೂ ಹಲವು ಬಾರಿ ನೋಡುತ್ತೇನೆ. ಈ ಸಿನಿಮಾ ನೋಡಿ ನನಗೆ ಅಷ್ಟೊಂದು ಪ್ರೇರಣೆಯಾಯಿತು. ದಂತಕಥೆಯಾಗಿರುವ ಈ ಐಕಾನಿಕ್ ಸಿನಿಮಾ ಕಾಂಗತಾರದ ಪೋಸ್ಟರ್ ಮಾಡಲೇಬೇಕು ಎಂದು ಅನಿಸಿತು ಎಂದಿದ್ದಾರೆ.
ಕಾಂತಾರ ಡಿಜಿಟಲ್ ಪೋಸ್ಟರ್
ಕಾಂತಾರ ಸಿನಿಮಾ ಸಖತ್ ಹಿಟ್
ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆದ ಕಾಂತಾರ ಸಿನಿಮಾ ನಂತರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿತು. ಬರೀ 16 ಕೋಟಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಅದರೊಂದಿಗೆ ಸಿನಿಮಾ ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಹಣ ಗಳಿಸಿತು. ಹಿಂದಿಯಲ್ಲಿ ಸಿನಿಮಾ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು.
ಕಾಂತಾರ 2 ಸಿನಿಮಾ
ಕಾಂತಾರ 2 ಸಿನಿಮಾ ಮಾಡಲು ಈಗಾಗಲೇ ಕೋಲದಲ್ಲಿ ಚಿತ್ರತಂಡ ಅನುಮತಿಯನ್ನು ಕೇಳಿತ್ತು. ಇದಕ್ಕೆ ದೈವ ಅನುಮತಿಯನ್ನೂ ಕೊಟ್ಟಿದ್ದೂ ಹಳೆತಂಡದೊಂದಿಗೆ ಸಿನಿಮಾವನ್ನು ಮಾಡುವಂತೆ ಹೇಳಿದೆ. ಹಾಗಾಗಿ ರಿಷಬ್ ಇನ್ನು ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿರಲಿದ್ದಾರೆ. ಈಗಾಗಲೇ ಎರಡನೇ ಭಾಗದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.