ಬದಿಯಡ್ಕ: ಕೋಝಿಕ್ಕೋಡ್ ನಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ನವ ಜೀವನ ಶಾಲೆ ಪ್ರಥಮ ಸ್ಥಾನದೊಂದಿಗೆ ‘ಎ’ ಗ್ರೇಡ್ ಗಳಿಸಿದೆ. ಯಕ್ಷಗಾನ ಸ್ಪರ್ಧೆಯಲ್ಲಿ 11 ತಂಡಗಳು ಭಾಗವಹಿಸಿದ್ದವು. ನವ ಜೀವನ ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಜನಮನಸೂರೆ ಗೊಂಡಿತು. ಪ್ರೇಕ್ಷರ ಮುಕ್ತ ಕರತಾಡನ ಬೆರಗುಗೊಳಿಸಿತು.
ನವಜೀವನ ಶಾಲಾ ತಂಡ ಜಿಲ್ಲೆಯನ್ನು ಪ್ರತಿನಿಧಿಸಿ ‘ಏಕಾದಶಿ ಮಹಾತ್ಮೆ’ ಪ್ರಸಂಗ ಪ್ರದರ್ಶಿಸಿತು. ಪಾತ್ರವರ್ಗದಲ್ಲಿ ತಂಡದ ನಾಯಕ ಚಿತ್ತರಂಜನ್ ಕಡಂದೇಲು(ವಿಷ್ಣು)ಉಪಾಸನ ಪಂಜರಿಕೆ(ದೇವೇಂದ್ರ), ದೀಕ್ಷಿತ್(ದೇವೇಂದ್ರ ಬಲ), ಯಶಸ್(ಮುರಾಸುರ), ಭರತ್ ರಾಜ್(ರಾಕ್ಷಸ ಬಲ), ಅನುರಾಗ್(ದೇವದೂತ), ಚಿನ್ಮಯಿ(ಶ್ರೀದೇವಿ)ಪಾತ್ರಗಳನ್ನು ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್ ಅಡ್ವಳ, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಮದ್ದಳೆಯಲ್ಲಿ ಮಹಾಲಿಂಗ ಸಹಕರಿಸಿದರು. ಜಗದೀಶ್ ಬದಿಯಡ್ಕ ಅವರ ಶ್ರೀಶೈಲ ಆಟ್ರ್ಸ್ ವೇಶಭೂಷಣ ಒದಗಿಸಿತ್ತು. ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ ನಿರ್ದೇಶನ ನೀಡಿದ್ದರು. ಶಿಕ್ಷಕರಾದ ಜ್ಯೋತ್ಸ್ನಾ ಎಂ ಕಡಂದೇಲು ಹಾಗೂ ನಿರಂಜನ್ ರೈ ಪೆರಡಾಲ ಸಹಕರಿಸಿದ್ದರು.
ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ, ಅಭಿನಂದನೆ ಸಲ್ಲಿಸಿದೆ.