ಮಂಜೇಶ್ವರ: ಅರಿಬೈಲು ಅಂಗನವಾಡಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಯಿತು. ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ದ್ವಜಾರೋಹಣ ನಡೆಸಿದರು. ಅಂಗನವಾಡಿ ಅಭಿವೃದ್ದಿ ಸಮಿತಿ ಸದಸ್ಯರಾದ ಗೋಪಾಲ ಶೆಟ್ಟಿ ಆರಿಬೈಲು ನೆತ್ಯ, ಮೊಹಮ್ಮದ್, ಆನಂದ, ಪವನ್ ಕುಮಾರ್, ಸಿನಾನ್, ಜೀವನ್, ಪುಟಾಣಿ ಮಕ್ಕಳು, ಸಹಾಯಕಿ ರಾಧಾ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಸಹ ಶಿಕ್ಷಕಿ ಜಯಶ್ರೀ ವಂದಿಸಿದರು.
ಅರಿಬೈಲಲ್ಲಿ ಗಣರಾಜ್ಯೋತ್ಸವ ಆಚರಣೆ
0
ಜನವರಿ 28, 2023