ಕಾಸರಗೋಡು: ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆ ಸಮಾಜದ ಸುಧಾರಣೆಗೆ ಸಾಕ್ಷಿಯಾಗಿದ್ದು, ಬೇಕಲ ಫೆಸ್ಟ್ ಅದಕ್ಕೆ ದಿಕ್ಸೂಚಿ ಎಂದು ಮಾಜಿ ಸಂಸದ ಪಿ.ಕರುಣಾಕರನ್ ಹೇಳಿದರು.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಕಲ ನದಿ ಪ್ರವಾಸೋದ್ಯಮ ಮತ್ತು ಬೀಚ್ ಪ್ರವಾಸೋದ್ಯಮದ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ಸಾಂಸ್ಕೃತಿಕ ಅಭಿವೃದ್ಧಿ ಜತೆಗೆ ಪ್ರವಾಸೋದ್ಯಮ ಕೇಂದ್ರಗಳಿಗೆ ಸಂಬಂಧಿಸಿದ ಕ್ಷೇತ್ರಗಳೂ ಇದೇ ರೀತಿ ಅಭಿವೃದ್ಧಿ ಹೊಂದಬೇಕು ಎಂದರು. ಪ್ರವಾಸೋದ್ಯಮ ಕೇಂದ್ರಗಳು ಜಾತಿ ಮತ್ತು ಧರ್ಮವನ್ನು ಮೀರಿ ಧಾರ್ಮಿಕ ಸಾಮರಸ್ಯಕ್ಕೆ ವಿಶಾಲ ವೇದಿಕೆಗಳಾಗುತ್ತಿವೆ. ಸರ್ಕಾರದ ಬೆಂಬಲ, ಕ್ರಮ ಮತ್ತು ನೀತಿ ನಿರ್ಧಾರವನ್ನು ಜನಪ್ರಿಯಗೊಳಿಸುವುದು ಸಾರ್ವಜನಿಕ ಕಾರ್ಯಕರ್ತನ ಕರ್ತವ್ಯವಾಗಿದೆ. ಇಂತಹ ಚಟುವಟಿಕೆ ನಡೆಸುವಲ್ಲಿ ಮುಂದಾಲೋಚನೆ ಕಾರ್ಯಯೋಜನೆಯ ಮೂಲಕ ಶಾಸಕ ಸಿ.ಎಚ್.ಕುಂಞಂಬು ಅವರು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಇಎ ಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ಬೇಕಲ ಬೀಚ್ ಉತ್ಸವ ಜಗತ್ತಿಗೆ ಏಕತೆಯ ಸಂದೇಶ ನೀಡುತ್ತಿದ್ದು, ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಲು ಬೀಚ್ ಫೆಸ್ಟ್ ನಾಂದಿಯಾಗಿದೆ ಎಂದರು. ಶಾಸಕ ಸಿ.ಎಚ್.ಕುಂಞಂಬು ಬೇಕಲ ಬೀಚ್ ಉತ್ಸವದ ನೇತೃತ್ವ ವಹಿಸುವ ಮೂಲಕ ಮಹತ್ತರವಾದ ಸೂಚನೆ ನೀಡಿದ್ದಾರೆ ಹಾಗೂ ಎ. ಕೆ.ಎಂ.ಅಶ್ರಫ್ ಹೇಳಿದರು.
ಕವಿ, ಸಾಹಿತಿ ಜಿನೇಶ್ ಕುಮಾರ್ ಉಪನ್ಯಾಸ ನೀಡಿದರು. ದೇಶದ ಏಕತೆಯನ್ನು ಹಾಳುಗೆಡಹುವ ದುರುದ್ದೇಶಪೂರಿತ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಎಂದರೆ ಸಹೋದರತ್ವವನ್ನು ಕಾಯುವುದು. ಬೇಕಲ ಬೀಚ್ ಫೆಸ್ಟಿವಲ್ ಮೂಲಕ ಅದು ಸಾಕಾರಗೊಂಡಿದೆ ಎಂದರು.
ಸಂಘಟನಾ ಸಮಿತಿ ಅಧ್ಯಕ್ಷ ಸಿ.ಎಚ್.ಕುಂಞಂಬು, ಮಾಜಿ ಶಾಸಕ ಕೆ.ಕುಂಞÂ ರಾಮನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಕಾನೂನು ಮತ್ತು ಸುವ್ಯವಸ್ಥೆ ಸಮಿತಿ ಸಂಚಾಲಕ ಮತ್ತು ರಿ. ಡಿವೈಎಸ್ಪಿ ಕೆ.ದಾಮೋದರನ್ ಮತ್ತಿತರರು ಭಾಗವಹಿಸಿದ್ದರು. ಸಂತೋμï ಪನಾಯಾಲ್ ಸ್ವಾಗತಿಸಿ, ಪಿ.ಕೆ.ಕುಂಞ ಅಬ್ದುಲ್ಲಾ ವಂದಿಸಿದರು.
ಬೀಚ್ ಉತ್ಸವ ಸಮಾಜದ ಸಾಂಸ್ಕøತಿಕ ಬೆಳವಣಿಗೆಗೆ ಪ್ರೇರಣೆ: ಪಿ.ಕರುಣಾಕರನ್
0
ಜನವರಿ 01, 2023