HEALTH TIPS

ಕೇರಳ ಸಿಪಿಐ(ಎಂ) ಮಹಿಳಾ ಘಟಕದ ಪೋಸ್ಟರ್‌ನಲ್ಲಿ ಬೆನಜೀರ್‌ ಭುಟ್ಟೊ: ಬಿಜೆಪಿ ಆಕ್ರೋಶ

 

                ತಿರುವನಂತಪುರ: ಕೇರಳ ಸಿಪಿಐ(ಎಂ)ನ ಮಹಿಳಾ ಘಟಕ 'ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್' (ಎಐಡಿಡಬ್ಲ್ಯುಎ) ತನ್ನ ಪೋಸ್ಟರ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಭಾವಚಿತ್ರವನ್ನು ಮುದ್ರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

           ಶುಕ್ರವಾರದಿಂದ ಸೋಮವಾರದವರೆಗೆ ತಿರುವನಂತಪುರದಲ್ಲಿ ನಡೆಯಲಿರುವ ಎಐಡಿಡಬ್ಲ್ಯುಎ ಸಮ್ಮೇಳನದ ಬಗ್ಗೆ ಹಾಕಲಾಗಿರುವ ಪೋಸ್ಟರ್‌ಗಳಲ್ಲಿ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಬೆನಜೀರ್‌ ಭುಟ್ಟೊ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ ಎನ್ನಲಾಗಿದೆ.

                 'ಇದು ಬೆನ್ನಿಗಿರಿದ ಕೃತ್ಯ - 'ಭಯೋತ್ಪಾದಕರಿಂದ' ಮತ ಎಂಬುದರ ಸರಳ ತರ್ಕ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್‌ ಹೇಳಿದ್ದಾರೆ.


                       ರಾಜ್ಯ ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ಮಾತನಾಡಿ, 'ಇದು ಸಿಪಿಐ(ಎಂ)ನ ದೇಶ ವಿರೋಧಿ ಕೃತ್ಯ' ಎಂದಿದ್ದಾರೆ.

                   'ರಾಜ್ಯ ರಾಜಧಾನಿಯ ಹೃದಯಭಾಗದಲ್ಲೇ ಭುಟ್ಟೊ ಅವರ ಪೋಸ್ಟರ್ ಅನ್ನು ಹಾಕಲಾಗಿದೆ. ಅವರಿಗೆ ಭುಟ್ಟೊ ಏನಾಗಬೇಕೆಂದು ನಾನು ಕೇಳಲಾರೆ. ಅವರು ದೀರ್ಘಕಾಲದಿಂದ ಇಂತಹ ಕೃತ್ಯಗಳಲ್ಲೇ ತೊಡಗಿದ್ದಾರೆ. ನಮ್ಮ ದೇಶವನ್ನು ನಾಶಮಾಡಲು ಯಾವಾಗಲೂ ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಅವರು ಆರಾಧಿಸುತ್ತಿದ್ದಾರೆ. ಅಂಥವರು (ಸಿಪಿಐ(ಎಂ)) ನಮ್ಮ ದೇಶದ ಶತ್ರುಗಳು. ಇದನ್ನೆಲ್ಲ ನಾವು ಅರ್ಥ ಮಾಡಿಕೊಳ್ಳಬೇಕು' ಎಂದು ವಾಚಸ್ಪತಿ ಹೇಳಿದ್ದಾರೆ.

         'ನಮ್ಮ ಶತ್ರುಗಳು ಪಾಕಿಸ್ತಾನ ಅಥವಾ ಚೀನಾ ಅಲ್ಲ. ಆದರೆ, ನಮ್ಮ ಜೊತೆಯಲ್ಲಿರುವವರೇ ನಮ್ಮ ಶತ್ರುಗಳು. ನಾವೆಲ್ಲರೂ ಅವರ ಬಗ್ಗೆ ಜಾಗರೂಕರಾಗಿರಬೇಕು' ಎಂದೂ ವಾಚಸ್ಪತಿ ಹೇಳಿದ್ದಾರೆ.

Tweet

Conversation

Noticed Benazir Bhutto's flex at the national conference of the AIDWA. No wonder, you people anti National by birth itself. She & her family were anti-India to the core. Benazir vowed, "to cut India into pieces." Shame
Image

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries