ಕಾಸರಗೋಡು: ಸಾವಯವ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀಲೇಶ್ವರ ನಗರಸಭೆಯು 508 ಯುನಿಟ್ ರಿಂಗ್ ಕಾಂಪೆÇೀಸ್ಟ್, 500 ಯೂನಿಟ್ ಪಿಟ್ ಕಾಂಪೆÇೀಸ್ಟ್ ಮತ್ತು 2840 ಯೂನಿಟ್ ಪೈಪ್ ಕಾಂಪೆÇೀಸ್ಟ್ ಫಲಾನುಭವಿಗಳಿಗೆ ವಿತರಣೆಗೆ ಸಿದ್ಧವಾಗಿದೆ.
ನಗರಸಭೆ ಅಧ್ಯಕ್ಷ ಟಿ.ವಿ. ಶಾಂತಾ ಅವರು 2022-23ನೇ ಸಾಲಿನ ಪುರಸಭೆಯ ವೈಯಕ್ತಿಕ ಫಲಾನುಭವಿಗಳಿಗೆ ವಿತರಣೆಗಿರುವ 1400 ರಿಂಗ್ ಕಾಂಪೆÇೀಸ್ಟ್ ವಿತರಣೆಯನ್ನು ಉದ್ಘಾಟಿಸಿ ಮಾತನಾಡಿ, ಮೊದಲ ಬ್ಯಾಚ್ ರಿಂಗ್ ಕಾಂಪೆÇೀಸ್ಟ್ ಫಲಾನುಭವಿಗಳಿಗೆ ವಿತರಣೆಗೆ ಸಿದ್ಧವಾಗಿದ್ದು, ಎಲ್ಲಾ ಘಟಕಗಳನ್ನು ಫೆಬ್ರವರಿಯಲ್ಲಿ ವಿತರಣೆ ಪೂರ್ತಿಗೊಳಿಸಲಾಗುವುದು. ನೀಲೇಶ್ವರ ನಗರಸಭಾ ಅಜೈವಿಕ ತ್ಯಾಜ್ಯ ಸಂಗ್ರಹಣೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಬದ್ಧವಾಗಿದೆ. ಕಳೆದ ತಿಂಗಳು ಸ್ಮಾರ್ಟ್ ಕಸ ಮಾನಿಟರಿಂಗ್ ವ್ಯವಸ್ಥೆಯನ್ನು ಘೋಷಿಸಲಾಗಿದೆ. ಶುಚಿತ್ವ ಮಿಷನ್ ಸಹಯೋಗದೊಂದಿಗೆ ಮತ್ತು ಕೆಲ್ಟ್ರಾನ್ ತಾಂತ್ರಿಕ ನೆರವಿನೊಂದಿಗೆ ನಗರಸಭಾ ವ್ಯಾಪ್ತಿಯಲ್ಲಿರುವ 11,858 ಮನೆಗಳು ಮತ್ತು 2,419 ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್‍ಗಳನ್ನು ಇರಿಸುವ ಕೆಲಸವನ್ನು ಪೂರ್ಣಗೊಳಿಸಲು ಹಸಿರು ಕ್ರಿಯಾ ಸೇನೆ ಮತ್ತು ಕುಟುಂಬಶ್ರೀಯ ಆಯ್ದ ಕಾರ್ಯಕರ್ತರನ್ನು ಆಧರಿಸಿ ಈ ಪ್ರಕಟಣೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮೊಹಮ್ಮದ್ ರಫಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಪಿ. ಶಿಬಾ, ಅಬೂಬಕರ್, ನಗರಸಭೆ ಕಾರ್ಯದರ್ಶಿ ಕೆ. ಮನೋಜ್ ಕುಮಾರ್, ಜೆಎಚ್‍ಐಗಳಾದ ನಾರಾಯಣಿ, ಪಿಪಿ ಸ್ಮಿತಾ ಮತ್ತು ರಚನಾ ಉಪಸ್ಥಿತರಿದ್ದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಟಿ.ಪಿ. ಲತಾ ಸ್ವಾಗತಿಸಿದರು.
ತ್ಯಾಜ್ಯನಿರ್ವಹಣೆಗೆ ನೀಲೇಶ್ವರ ನಗರಸಭೆ ಯೋಜನೆ: ಕಾಂಪೋಸ್ಟ್ ಪಿಟ್‍ಗಳ ವಿತರಣೆ
0
ಜನವರಿ 25, 2023