ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆಯನ್ನು ಉಲ್ಲಂಘಿಸಿ ಅವರ ಪಾದಸ್ಪರ್ಶಿಸಲು ಯತ್ನಿಸಿದ ರಾಜಸ್ಥಾನ ಸರ್ಕಾರದ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ.
ಜ.04 ರಂದು ನಡೆದ ಕಾರ್ಯಕ್ರಮದಲ್ಲಿ ಇಂಜಿನಿಯರ್ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸುವುದಕ್ಕೆ ಇಂಜಿನಿಯರ್ ಯತ್ನಿಸಿದ್ದರು.
ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ.
ಅಂಬಾ ಸಿಯೋಲ್ ಎಂಬ ಪಿಹೆಚ್ ಇಡಿಯ ಕಿರಿಯ ಇಂಜಿನಿಯರ್ ಜ.04 ರಂದು ನಡೆದ ಸ್ಕೌಟ್ ಗೈಡ್
ಜಾಂಬೊರಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಪಾದ ಸ್ಪರ್ಶಿಸಲು
ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಮಾಡಲಾಗಿದೆ ಎಂದು ಸರ್ಕಾರದ
ಆದೇಶದಲ್ಲಿ ತಿಳಿಸಲಾಗಿದೆ.
ಸಿಯೋಲ್ ಅವರು ಕಾರ್ಯಕ್ರಮದಲ್ಲಿ ನೀರಿನ ವ್ಯವಸ್ಥೆ ನೋಡಿಕೊಳ್ಳುವುದಕ್ಕಾಗಿ
ನಿಯೋಜಿಸಲ್ಪಟ್ಟಿದ್ದರು. ಆದರೆ ಭದ್ರತೆಯನ್ನು ಉಲ್ಲಂಘಿಸಿ ಆಕೆ ರಾಷ್ಟ್ರಪತಿಗಳನ್ನು
ಸ್ವಾಗತಿಸುವ ಅಧಿಕಾರಿಗಳ ಸಾಲಿಗೆ ತಲುಪಿದ್ದರು. ಅಷ್ಟೇ ಅಲ್ಲದೇ ಏಕಾ ಏಕಿ
ರಾಷ್ಟ್ರಪತಿಗಳ ಬಳಿಗೆ ತೆರಳಿ ಅವರ ಕಾಲಿಗೆರಗಲು ಯತ್ನಿಸಿದರು. ಆದರೆ ಆಕೆಯನ್ನು
ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ತಡೆದಿದ್ದರು.
ಘಟನೆಯನ್ನು ಗೃಹ ಸಚಿವಾಲಯ ಗಂಭೀವಾಗಿ ಪರಿಗಣಿಸಿತ್ತು.