ಮಂಜೇಶ್ವರ: ಕೇರಳ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕದಲ್ಲಿ ನಡೆಯುವ ‘ಗಿಳಿವಿಂಡು ಬಹುಭಾಷಾ’ ಸಮ್ಮೇಳನ ಇಂದು ಆರಂಭವಾಗಲಿದೆ.
ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಸಚ್ಚಿದಾನಂದನ್ ಉದ್ಘಾಟಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಕೇರಳ ಸಂಗೀತ ನಾಟಕ ಅಕಾಡೆಮಿ, ಕೇರಳ ಜಾನಪದ ಅಕಾಡೆಮಿ, ಕೇರಳ ಲಲಿತ ಕಲಾ ಅಕಾಡೆಮಿ, ಕೇರಳ ತುಳು ಅಕಾಡೆಮಿ ಮತ್ತು ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಇವುಗಳ ಸಹಯೋಗದಲ್ಲಿ ಬಹುಭಾμÁ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಬಹುಭಾμÁ ಸಮ್ಮೇಳನದ ಭಾಗವಾಗಿ ಆಯೋಜಿಸಿರುವ ವಸ್ತುಪ್ರದರ್ಶನವನ್ನು ಖ್ಯಾತ ಚಿತ್ರಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಉದ್ಘಾಟಿಸುವರು. ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಅಶೋಕನ್ ಚರುವಿಲ್ ಭಾμÁ ಪ್ರದರ್ಶನವನ್ನು ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ಕುಂuಟಿಜeಜಿiಟಿeಜರಾಮನ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು.ಮ ಧ್ಯಾಹ್ನ 2 ಗಂಟೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಕಾಸರಗೋಡಿನ ಇತಿಹಾಸದಲ್ಲಿ ಭಾμÉಗಳು ಎಂಬ ವಿಷಯದ ಕುರಿತು ಡಾ.ಸಿ.ಬಾಲನ್, ಕಾಸರಕೋಡಿನ ಭಾμÁ ಸಂಸ್ಕøತಿಯ ವರ್ತಮಾನ ಮತ್ತು ಭವಿಷ್ಯದ ಕುರಿತು ಡಾ.ರಾಧಾಕೃಷ್ಣ ಬೆಳ್ಳೂರು, ತುಳು ಮತ್ತು ಮಲಯಾಳಂ ಭಾμÉಗಳ ಕುರಿತು ಡಾ.ಎ.ಎಂ.ಶ್ರೀಧರನ್. ಭಾμÉ ಮತ್ತು ಸಂವಿಧಾನ ಕುರಿತು ಪಿ.ಕರುಣಾಕರನ್ ,ಹಾಗು ಹಲವು ಭಾμÉಗಳಲ್ಲಿ ಜೀವನ ಎಂಬ ವಿಷಯದ ಕುರಿತು ಸುಂದರ ಬಾರಡ್ಕ ಅವರು ಮಾತನಾಡಲಿದ್ದಾರ
ಸಂಜೆ 4.30ಕ್ಕೆ ಕನ್ನಡ, ಮಲಯಾಳಂ ಹಾಗು ತುಳು ಕವಿಗಳು ಭಾಗವಹಿಸುವ ಕವಿಗೋಷ್ಠಿ ಏರ್ಪಡಿಸಲಾಗಿದೆ. ನಂತರ ನಡೆಯುವ ನಾಟಕ ಮೇಳವನ್ನು ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿ ಕರಿವೆಳ್ಳೂರು ಮುರಳಿ ಉದ್ಘಾಟಿಸಲಿದ್ದಾರೆ. ಬಳಿಕ ಯಕ್ಷಗಾನ ಹಾಗು ನಾಟಕ ಪ್ರದರ್ಶನ ನಡೆಯಲಿದೆ.
ಎರಡನೇ ದಿನವಾದ ಶನಿವಾರ ಕಾಸರಗೋಡಿನ ಭಾμÉಗಳಲ್ಲಿ ಜಾನಪದ ಗೀತೆಗಳು ಮತ್ತು ಜಾನಪದ ಕಥೆಗಳ ಪ್ರಸ್ತುತಿ ಗಾಯನ, ನಂತರ ಸಾಹಿತ್ಯದಲ್ಲಿ ಕಾಸರಗೋಡಿನ ಬದುಕು ಎಂಬ ವಿಚಾರ ಸಂಕಿರಣವನ್ನು ಸಾಹಿತಿ ಸಿ.ವಿ.ಬಾಲಕೃಷ್ಣನ್ ಉದ್ಘಾಟಿಸಲಿದ್ದಾರೆ. ಇಪಿ ರಾಜಗೋಪಾಲನ್, ಗ್ರಂಥಲೋಕದ ಸಂಪಾದಕ ಪಿ.ವಿ.ಕೆ.ಪನಯಲ್, ವಿಕ್ರಂ ಕ್ರಾಂತಿಕರೆ, ಸೂರಬ್, ರಾಧಾಕೃಷ್ಣ ಉಳಿಯತ್ತಡ್ಕ, ರಾಜೇಶ್ ಬೆಜ್ಜಂಗಳ, ಗಂಗಾಧರನ್ ಆದಿಯೋಡಿ ಮತ್ತಿತರರು ಮಾತನಾಡಲಿದ್ದಾರೆ. ನಂತರ ನಡೆಯುವ ಕವಿಗೋಷ್ಠಿಯಲ್ಲಿ ಕಾಸರಗೋಡಿನ ವಿವಿಧ ಭಾμÉಯ ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಜೆ 4:00ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಸಾಹಿತಿ ಕೆ.ಪಿ.ರಾಮನುಣ್ಣಿ ಉದ್ಘಾಟಿಸುವರು. ಸಮಾರೋಪ ಸಮಾರಂಭದ ನಂತರ ಪೂರಕ್ಕಳಿ ಹಾಗು, ನಾಟಕ ಪ್ರದರ್ಶನ ಗೊಳ್ಳಲಿದೆ.
ಸಾಹಿತ್ಯ ಅಕಾಡೆಮಿಯ ಬಹುಭಾಷಾ ಸಮ್ಮೇಳನ ಇಂದು ಆರಂಭ
0
ಜನವರಿ 05, 2023
Tags