ನವದೆಹಲಿ: ಹೆಚ್ಚಿನ ನೀರಿನ ಬಳಕೆಯನ್ನು ಕಡಿಮೆ ಮಾಡಲು ಭಾರತೀಯ ರೈತರು ಭತ್ತದ ಬದಲು ಸಿರಿಧಾನ್ಯ ಕೃಷಿಗೆ ಬದಲಾಗಬೇಕಾಗಿದೆ ಕೇಂದ್ರದ ಪ್ರಮುಖ ಪೋಷಣ ಅಭಿಯಾನದಲ್ಲಿ ಸಿರಿಧಾನ್ಯ ಮಾತ್ರ ನೀಡಬೇಕು ಎಂದು ಭಾರತದ ಜಿ20 ಶೆರ್ಪಾ ಅಮಿತಾಬ್ ಕಾಂತ್ ಅವರು ಬುಧವಾರ ಹೇಳಿದ್ದಾರೆ.
ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಂತ್, ಸಿರಿಧಾನ್ಯಗಳು ಪೌಷ್ಟಿಕಾಂಶ ವಿಶೇಷವಾಗಿ ಪ್ರೋಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚು ಹೊಂದಿವೆ. ದೇಶದಲ್ಲಿ ಸಿರಿಧಾನ್ಯ ಸೇವನೆಯನ್ನು ಉತ್ತೇಜಿಸಬೇಕು ಎಂದಿದ್ದಾರೆ.
"ಭಾರತವು ಭತ್ತ ಮತ್ತು ಗೋಧಿ ಕೃಷಿಯಿಂದ ದೂರ ಸರಿಯಬೇಕು ಮತ್ತು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸಿ ರಫ್ತು ಮಾಡಬೇಕಾಗಿದೆ. ಸಿರಿಧಾನ್ಯ ಕೃಷಿಯು ನೀರನ್ನು ಉಳಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.
ಸಿರಿಧಾನ್ಯ ಭಾರತದ ಸೂಪರ್‌ಫುಡ್ ಮಾಡುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಕೇಂದ್ರ ಸರ್ಕಾರದ ಎಲ್ಲಾ ಪೋಷಣ ಅಭಿಯಾನ ಯೋಜನೆಗಳಲ್ಲಿ ಸಿರಿಧಾನ್ಯವನ್ನು ಮಾತ್ರ ನೀಡಬೇಕು ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.