HEALTH TIPS

ಕಾಶ್ಮೀರದ ಕಾಂಗ್ರೆಸ್‌ ವಕ್ತಾರೆ ದೀಪಿಕಾ ಪುಷ್ಕರ್‌ ರಾಜೀನಾಮೆ

 

         ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ ವಕ್ತಾರೆ ದೀಪಿಕಾ ಪುಷ್ಕರ್‌ ನಾಥ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

              ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಬರುವ ಮುನ್ನವೇ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

                   ಅತ್ಯಾಚಾರ ಪ್ರಕರಣವನ್ನು ಸಮರ್ಥನೆ ಮಾಡಿಕೊಂಡಿದ್ದ ಲಾಲ್‌ ಸಿಂಗ್‌ ಅವರಿಗೆ ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದನ್ನು ಖಂಡಿಸಿ, ಸೈದ್ಧಾಂತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಪಕ್ಷವನ್ನು ಬಿಡುತ್ತಿರುವುದಾಗಿ ಹೇಳಿದ್ದಾರೆ.

                8 ವರ್ಷದ ಅಲೆಮಾರಿ ಬಾಲಕಿಯ ಮೇಲೆ ಕಥುವಾದಲ್ಲಿ ಅತ್ಯಾಚಾರ ನಡೆದಿತ್ತು. ಇದನ್ನು ಲಾಲ್‌ ಸಿಂಗ್‌ ಸಮರ್ಥಿಸಿಕೊಂಡಿದ್ದರು.


               ಅತ್ಯಾಚಾರ ಆರೋಪಿಗಳನ್ನು ರಕ್ಷಿಸುವ ಮೂಲಕ ಲಾಲ್‌ ಸಿಂಗ್‌ ಇಡೀ ಕಾಶ್ಮೀರವನ್ನು ಇಬ್ಬಾಗ ಮಾಡಿದ್ದರು. ಸೈದ್ದಾಂತಿಕವಾಗಿ ಅವರು ಜೋಡೊ ಯಾತ್ರೆಯಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

              ಲಾಲ್‌ ಸಿಂಗ್‌ ಅವರು ಎರಡು ಸಲ ಸಂಸದರಾಗಿ, ಮೂರು ಸಲ ಶಾಸಕರರಾಗಿ ಆಯ್ಕೆಯಾಗಿದ್ದರು. ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು.

In view of Ch.Lal Singh's proposal of joining @bharatjodo & @INCJammuKashmir allowing the same, I am left with no other option but to resign from @INCIndia Lal Singh was responsible in sabotaging the Kathua rape case in 2018 by brazenly defending rapists.
2.9K
Reply
Copy link

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries