ಬದಿಯಡ್ಕ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆ.ಪಿ.ಎಸ್.ಟಿ.ಎ) ಕುಂಬಳ ಉಪಜಿಲ್ಲಾ ಸಮ್ಮೇಳನ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಧ್ವಜಾರೋಹಣಗೈದರು. ಬಲಿಕ ನಡೆದ ವಿದ್ಯಾಭ್ಯಾಸ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರ್ ಉದ್ಘಾಟಿಸಿದರು. ಉಪಜಿಲ್ಲಾ ಉಪಾಧ್ಯಕ್ಷ ಎಂ. ಶಶಿಧರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಬೆನ್ನಿ ಮಾಸ್ತರ್ ಮುಖ್ಯ ಭಾಷಣ ಮಾಡಿದರು.
ಶೇಣಿ ಯುಪಿ ಶಾಲೆಯ ಮುಖ್ಯೋಪಾಧ್ಯಾಯ, ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಧಾಕೃಷ್ಣ ನಾಯಕ್, ಕ್ಷೇಮ ಪಿಂಚಣಿ ಸಂಘಟನೆ ಮಂಡಲ ಅಧ್ಯಕ್ಷ ಚಂದ್ರಹಾಸ ಮಾಸ್ತರ್, ನವಜೀವನ ಶಾಲೆಯ ಮುಖ್ಯೋಪಾಧ್ಯ್ಯಾಯಿನಿ ಮಿನಿ ಟೀಚರ್, ಜಿಲ್ಲಾ ಉಪಾಧ್ಯಕ್ಷ ತಸ್ನಿ ಟೀಚರ್, ಗಿರೀಶ್ ಬಾಬು ಶುಭಹಾರೈಸಿದರು. ಉಪಜಿಲ್ಲಾ ಜೊತೆ ಕಾರ್ಯದರ್ಶಿ ಓಮನ ಟೀಚರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶರತ್ ಚಂದ್ರ ಶೆಟ್ಟಿ ವಂದಿಸಿದರು.
ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ವಹಿಸಿದರು. ಪ್ರಾಂತ್ಯ ಕಾರ್ಯದರ್ಶಿ ಗಿರಿಜಾ ಟೀಚರ್ ಉದ್ಘಾಟಿಸಿ ಮಾತನಾಡಿ, ಕೇರಳ ಶಿಕ್ಷಣ ರಂಗದಲ್ಲಿ ಅಧ್ಯಾಪಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಸಮಯ ದೂಡುತ್ತಿರುವುದು ಖಂಡನಾರ್ಹ. ಸಂಘಟನೆಯ ಹೋರಾಟದ ಫಲವಾಗಿ ಹೈಸ್ಕೂಲ್ ವಿಭಾಗದದಲ್ಲಿ ಅಧ್ಯಾಪಕ ವಿದ್ಯಾರ್ಥಿ ಅನುಪಾತ ಪುನಃ 1/40 ಎಂದು ಸರ್ಕಾರ ನಿರ್ಧರಿಸಿದೆ. ಎರಡು ವರ್ಷದಿಂದ ಅಧ್ಯಾಪಕರ ಕ್ಷೇಮ ಭತ್ತೆಯನ್ನು ಕೊಡದೆ ವಂಚಿಸಿದೆ ಎಂದು ಆರೋಪಿಸಿದರು.
ಪ್ರಾಂತ್ಯ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ್ ಮಾಸ್ತರ್, ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರು, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಮಾಸ್ತರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ಸಿನ ಹಿರಿಯ ನೇತಾರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಗೋಪಾಲಕೃಷ್ಣ, ರಾಜ್ಯ ಕೌನ್ಸಿಲರ್ ಅಶೋಕ್ ಮಾಸ್ತರ್ ಶುಭ ಹಾರೈಸಿದರು. ಕುಂಬಳೆ ಜಿಲ್ಲಾ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ಮಲ್ಲಿಕಾ ಟೀಚರ್ ವಂದಿಸಿದರು.
ಪ್ರತಿನಿಧಿ ಸಮ್ಮೇಳನವನ್ನು ಜಿಲ್ಲಾ ಕಾರ್ಯದರ್ಶಿ ಕೆ ಶ್ರೀನಿವಾಸನ್ ಉದ್ಘಾಟಿಸಿದರು. ಉಪ ಸಮಿತಿ ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ, ರಾಧಾಕೃಷ್ಣನ್ ಶುಭ ಹಾರೈಸಿದರು. ಹಿರಿಯ ಸದಸ್ಯರಾದ ಯೂಸುಫ್ ಕೋಟ್ಯಾಡಿ, ಸರಸಿಜಾಕ್ಷನ್ ನಂಬಿಯಾರ್ ಉಪಸ್ಥಿತರಿದ್ದರು. ಉಪ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣನ್ ಸ್ವಾಗತಿಸಿದರು. ಬಳಿಕ ವಾರ್ಷಿಕ ವರದಿ ,ಲೆಕ್ಕಪತ್ರ ಮಂಡನೆ ನಡೆಯಿತು. ನೂತನ ಸಮಿತಿ ರೂಪೀಕರಿಸಲಾಯಿತು. ಜೊತೆ ಕಾರ್ಯದರ್ಶಿ ದಾಸಪ್ಪ ವಂದಿಸಿದರು.