ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಮತ್ತು ಕಾಸರಗೋಡು ಫಿಲ್ಮ್ ಸೊಸೈಟಿ ಜಂಟಿಯಾಗಿ ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ಸಾಹಿತಿ, ಲೇಖಕಿ ಸಾರಾ ಅಬೂಬಕರ್ ಅವರ ನುಡಿ ನಮನ ಸಭೆಯನ್ನು ಭಾನುವಾರ ಗಿಳಿವಿಂಡಲ್ಲಿ ಆಯೋಜಿಸಿತ್ತು.
ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಮರಣಾ ಸಭೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಫಾತಿಮಾ ಶಮ್ನಾ ಉದ್ಘಾಟಿಸಿದರು.
ಕಾಸರಗೋಡು ಫಿಲಂ ಸೊಸೈಟಿ ಅಧ್ಯಕ್ಷ ಜಿ.ಬಿ.ವತ್ಸನ್ ಸಂಸ್ಮರಣಾ ಉಪನ್ಯಾಸ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಸಾರಾ ಅಬೂಬಕರ್ ಅವರು ತಮ್ಮ ಬರಹ, ಕಾದಂಬರಿಗಳ ಮೂಲಕ ಸಮಾಜದಲ್ಲಿನ ಅನಿಷ್ಟ, ಅನ್ಯಾಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ಲೇಖಕಿ. ಅವರ ಪ್ರಸಿದ್ದ ಕೃತಿ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಮಲೆಯಾಳದಲ್ಲಿ ಭಾಷಾಂತರಗೊಂಡು ಪ್ರಕಟವಾದಾಗ ಉಂಟಾದ ಪ್ರತಿಕ್ರಿಯೆ, ಆಕ್ಷೇಪಗಳ ಬಗ್ಗೆ ಕೆಚ್ಚೆದೆಯ ನಿಲುವು ತಳೆದ ಅವರ ದಿಟ್ಟ ನಿಲುವು ಆ ಕಾಲದಲ್ಲಿ ಸಣ್ಣದೇನೂ ಅಲ್ಲ ಎಂದು ವಿಶ್ಲೇಶಿಸಿದರು.
ಕಾಸರಗೋಡು ಫಿಲ್ಮ್ ಸೊಸೈಟಿ ಕೋಶಾಧಿಕಾರಿ ಎಂ.ಪದ್ಮಾಕ್ಷನ್, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮದ್ ಹುಸೇನ್ ಸ್ಮರಿಸಿದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ವನಿತಾ ಆರ್ ಶೆಟ್ಟಿ ವಂದಿಸಿದರು.
ಗಿಳಿವಿಂಡಲ್ಲಿ ಸಾರಾ ಅಬೂಬಕರ್ ಗೆ ನುಡಿ ನಮನ
0
ಜನವರಿ 16, 2023