ತಿರುವನಂತಪುರ: ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮತ್ತು ಜೋಡಿಸಲು ಕೇರಳಕ್ಕೆ ಬರುವ ಕಂಪನಿಗಳಿಗೆ ಸ್ಥಳಾವಕಾಶ, ಕಟ್ಟಡ ಮತ್ತು ಕಾರ್ಯಾಗಾರವನ್ನು ಒದಗಿಸಲು ಕೆಎಸ್‍ಆರ್‍ಟಿಸಿ ಸಿದ್ಧವಿದೆ ಎಂದು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ.
ಇ-ಮೊಬಿಲಿಟಿ ಮತ್ತು ಅಸಾಂಪ್ರದಾಯಿಕ ಇಂಧನ ಮೂಲಗಳ ಕುರಿತು ಅಂತರಾಷ್ಟ್ರೀಯ ಸಮ್ಮೇಳನವಾದ 'ಎವಾಲ್ವ್' ನ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
‘ಎವಾಲ್ವ್’ ಅನ್ನು ಮೋಟಾರು ವಾಹನಗಳ ಇಲಾಖೆ ಆಯೋಜಿಸಿದೆ. ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ರಾಮೇಶ್ವರ್ ತೇಲಿ, ಕೇರಳದಲ್ಲಿ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಮತ್ತು ಬಿಪಿಸಿಎಲ್ ಸಹಯೋಗದಲ್ಲಿ ಮೂರು ಹೈಡ್ರೋಜನ್ ಭರ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆ್ಯಂಟನಿರಾಜು ಮಾಹಿತಿ ನೀಡಿದರು. ಎಎಸ್.ಎ.ಪಿ. ಸೇರಿದಂತೆ ಸರ್ಕಾರಿ ಏಜೆನ್ಸಿಗಳ ಸಹಯೋಗದೊಂದಿಗೆ ಕೇರಳದಲ್ಲಿ ಹೈಡ್ರೋಜನ್ ಹಬ್ ಅನ್ನು ಸ್ಥಾಪಿಸುವ ಮೊದಲು ಆದಿ ಗ್ರೂಪ್ ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯನ್ನು ಸಿದ್ಧಪಡಿಸುತ್ತದೆ ಎಂದು ಘೋಷಿಸಲಾಯಿತು.
ಕೆಎಸ್‍ಆರ್‍ಟಿಸಿ ಇನ್ನೂ 400 ಹೊಸ ಇ ಬಸ್‍ಗಳನ್ನು ಖರೀದಿಸಲಿದೆ. ಇದಲ್ಲದೇ ಡೀಸೆಲ್ ಬಸ್‍ಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸುವ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು.
ಸಮಾರೋಪ ಸಮಾರಂಭವನ್ನು ಸಚಿವ ಜಿ.ಆರ್. ಅನಿಲ್ ಉದ್ಘಾಟಿಸಿದರು. ಆಂಟನಿ ರಾಜು ಸ್ಮರಣಿಕೆ ಬಿಡುಗಡೆ ಮಾಡಿದರು. ಮಾಲ್ಡೀವ್ಸ್ ಕಾನ್ಸುಲ್ ಜನರಲ್ ಅಮಿನಾ ಅಬ್ದುಲ್ಲಾ ದೀದಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಆರ್. ಜ್ಯೋತಿಲಾಲ್, ಸಾರಿಗೆ ಇಲಾಖೆ ಕಾರ್ಯದರ್ಶಿ ಬಿಜು ಪ್ರಭಾಕರ್, ಸಾರಿಗೆ ಇಲಾಖೆ ಆಯುಕ್ತ ಎಸ್. ಶ್ರೀಜಿತ್, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಪಿ.ಎಸ್. ಪ್ರಮೋದ್ ಶಂಕರ್ ಮತ್ತಿತರರು ಮಾತನಾಡಿದರು.
ಇ-ವಾಹನ ತಯಾರಿಕಾ ಕಂಪನಿಗಳಿಗೆ ಕೆ.ಎಸ್.ಆರ್.ಟಿ.ಸಿ. ಸ್ಥಳ, ಕಟ್ಟಡ ಮತ್ತು ಕಾರ್ಯಾಗಾರ ನೀಡಲಿದೆ: ಸಾರಿಗೆ ಸಚಿವ ಆಂಟನಿ ರಾಜು
0
ಜನವರಿ 23, 2023