ಕಾಸರಗೋಡು : ಬೇಕಲ ಬ್ರದರ್ಸ್ ಆಶ್ರಯದಲ್ಲಿ ಬಿ.ಎಂ.ಶಾಫಿ ಹಾಜಿ ಸ್ಮಾರಕ ಟ್ರೋಫಿ ಉತ್ತರ ಮಲಬಾರ್ ಸೆವೆನ್ಸ್ ಫುಟ್ ಬಾಲ್ ಪಂದ್ಯಾವಳಿ ಜನವರಿ 13 ರಿಂದ ಬೇಕಲ ಝಿರ್ವ ಅಕ್ವಾಟಿಕ್ ಸೆಂಟರ್ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಪ್ರೇಕ್ಷಕರಿಗೆ ಮುಕ್ತ ಪ್ರವೇಶವಿರುವುದಾಗಿ ಪಂದ್ಯಾವಳಿ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
13ರಂದು ಸಂಜೆ 5 ಗಂಟೆಗೆ ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್ ಪಂದ್ಯಾವಳಿ ಉದ್ಘಾಟಿಸುವರು. ಹ್ಯಾಪಿ ಫ್ರೂಟ್ಸ್, ಬೇಕಲ್ ಪೆÇಲೀಸ್, ಮೊಗ್ರಾಲ್ ಬ್ರದರ್ಸ್, ಯಂಗ್ ಹೀರೋಸ್ ಪುಚ್ಕಾಡಿ, ಮೊಹಮ್ಮದನ್ಸ್ ಮವ್ವಲ್, ಎಸ್‍ಎ ಫುಟ್‍ಬಾಲ್ ಅಕಾಡೆಮಿ, ಒಫಾನ್ಸ್ ಕೀಯೂರ್, ಗ್ರೀನ್ ಸ್ಟಾರ್ ಪಳ್ಳಿಕೆರೆ, ಎಂಎಫ್‍ಸಿ ಮೇಲ್ಪರಂಬ, ಸಿಟಿಜನ್ ಉಪ್ಪಳ, ರೇಂಜರ್ಸ್ ಮೂಕುಡ್, ಬ್ರದರ್ಸ್ ಬೇಕಲ್, ಎಫ್‍ಸಿ ಪಡನ್ನ, ಗ್ರೀನ್‍ಸ್ಟಾರ್ ಕುನಿಯ, ಪ್ರಿಯದರ್ಶಿನಿ ಒಯಿಞವಳಪ್ಪು, ಎನ್‍ಬಿಎಂ ಮೋಟ್ಟಮ್ಮಲ್ ಬ್ರದರ್ಸ್ ತಂಡಗಳು ಸ್ಪರ್ಧಿಸಲಿವೆ.
ಪಂದ್ಯಾಟದಲ್ಲಿ ಸಂತೋಷ್ ಟ್ರೋಫಿ ಆಟಗಾರರು, ನೈಜೀರಿಯಾ ಮತ್ತು ಘಾನಾದ ಆಟಗಾರರು ವಿವಿಧ ತಂಡಗಳಲ್ಲಿ ಆಡಲಿದ್ದಾರೆ. ಎಲ್ಲಾಪಂದ್ಯಾವಳಿಯು ಪ್ರತಿದಿನ ಸಂಜೆ 5ಕ್ಕೆ ಅರಂಭಗೊಳ್ಳಳಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರದರ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್‍ಕುಞÂ ಚೋನಾಯಿ, ಪಂದ್ಯಾವಳಿ ಸಮಿತಿ ಅಧ್ಯಕ್ಷ ಅಹ್ಮದ್ ರಿಫಾಯಿ, ಆಹ್ವಾನಿತರಾದ ಶರೀಫ್ ಮೊಯ್ದು, ಬಶೀರ್ ಕುನ್ನಿಲ್, ಇಸ್ಮಾಯಿಲ್ ಬೇಕರ್, ಸಿ ಹಮೀದ್, ಅನ್ವರ್ ಬೇಕಲ್ ಉಪಸ್ಥಿತರಿದ್ದರು.
ಬೇಕಲ್ ಬ್ರದರ್ಸ್ ವತಿಯಿಂದ ಉತ್ತರ ಮಲಬಾರ್ ಸೆವೆನ್ಸ್ ಫುಟ್ ಬಾಲ್ ಪಂದ್ಯಾವಳಿ
0
ಜನವರಿ 11, 2023
Tags